ಶಾಲಾ ಬಸ್ ಗೆ ಬೆಂಕಿ ತಪ್ಪಿದ ಭಾರಿ ಅನಾಹುತ

ಸುಳ್ಯ ಮಾರ್ಚ್ 15: ಶಾರ್ಟ್ ಸರ್ಕಿಟ್ ನಿಂದ ಶಾಲಾ ಬಸ್ ಗೆ ಬೆಂಕಿಗೆ ಆಹುತಿಯಾದ ಘಟನೆ ಸುಳ್ಯದ ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಎಂಬಲ್ಲಿ ನಡೆದಿದೆ.

ಕೆ.ವಿ.ಜೆ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ ಬಸ್ ಇದಾಗಿದ್ದು ಇಂದು ಮುಂಜಾನೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ತೆರಳುತ್ತಿದ್ದ ಸಂದರ್ಭ ತಾಂತ್ರಿಕ ದೋಷದಿಂದ ಬಸ್ ಹೊತ್ತಿ ಉರಿದಿದೆ. ಘಟನೆ ಸಂದರ್ಭದಲ್ಲಿ ಮಕ್ಕಳು ಇಲ್ಲದಿದ್ದ ಕಾರಣ ಭಾರಿ ಅನಾಹುತ ತಪ್ಪಿದೆ. ಬಸ್ ಗೆ ಬೆಂಕಿ ಹೊತ್ತಿದ್ದ ಸಂದರ್ಭದಲ್ಲಿ ಬಸ್ ನ ಚಾಲಕ ಮತ್ತು ನಿರ್ವಾಹಕ ಬಸ್ ನಿಂದ ಜಿಗಿದಿದ್ದಾರೆ. ಇದರಿಂದಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ.

ಇಂದು ಮುಂಜಾನೆ 5.45ರ ಸುಮಾರಿಗೆ ಈ ಘಟನೆ ನಡೆದಿದ್ದು ಶಾರ್ಟ್ ಸರ್ಕೀಟ್ ಬಸ್ ಗೆ ಬೆಂಕಿ ಬಿಳಲು ಕಾರಣ ಎಂದು ಹೇಳಲಾಗಿದೆ. ಬೆಂಕಿಗೆ ಬಸ್ ಸಂಪೂರ್ಣ ಸುಟ್ಟುಹೋಗಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

VIDEO

Facebook Comments

comments