LATEST NEWS
ದಕ್ಷಿಣ ಮಂಡಲದ ಮಹಿಳಾ ಮೋರ್ಚಾದ ವತಿಯಿಂದ ವಿದ್ಯಾರ್ಥಿನಿಯ ಜೀವ ರಕ್ಷಿಸಿದ ಬಸ್ ಸಿಬ್ಬಂದಿಗಳಿಗೆ ಸನ್ಮಾನದ ಸಹಿತ ರಕ್ಷಾಬಂಧನ ಆಚರಣೆ
ಮಂಗಳೂರು, ಆಗಸ್ಟ್ 19: ಇತ್ತೀಚಿಗೆ ನಗರದ ಬಸ್ಸಿನಲ್ಲಿ ಹೃದಯಾಘಾತಕ್ಕೊಳಗಾದ ವಿದ್ಯಾರ್ಥಿನಿಯ ಜೀವ ಉಳಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದ ರೂಟ್ ನಂಬರ್ 13 ಎಫ್, ಬಸ್ ಸಿಬ್ಬಂದಿಗಳಿಗೆ ಮಂಗಳೂರು ನಗರ ದಕ್ಷಿಣ ಮಂಡಲದ ಮಹಿಳಾ ಮೋರ್ಚಾದ ವತಿಯಿಂದ ಸನ್ಮಾನದ ಸಹಿತ ರಕ್ಷೆಯನ್ನು ಕಟ್ಟುವ ಮೂಲಕ ಅರ್ಥಪೂರ್ಣ ರಕ್ಷಾಬಂಧನವನ್ನು ಆಚರಿಸಲಾಯಿತು.
ಜಿಲ್ಲೆಯಾದ್ಯಂತ ವ್ಯಾಪಕ ಪ್ರಶಂಸನೆಗೊಳಗಾಗಿದ್ದ ಬಸ್ ಸಿಬ್ಬಂದಿಗಳ ಕರ್ತವ್ಯ ಪ್ರಜ್ಞೆಗೆ ಅನೇಕರು ಸನ್ಮಾನಿಸಿದ್ದು ಇದೀಗ ಶಾಸಕ ವೇದವ್ಯಾಸ ಕಾಮತ್ ರವರ ಮಾರ್ಗದರ್ಶನದಲ್ಲಿ ಚಾಲಕ ಗಜೇಂದ್ರ ಕುಂದರ್ ಸಹಿತ ಬಸ್ ಸಿಬ್ಬಂದಿಗಳಾದ ಮಹೇಶ್ ಪೂಜಾರಿ ಹಾಗೂ ಸುರೇಶ್ ರವರಿಗೆ ದಕ್ಷಿಣ ಮಂಡಲದ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ಸನ್ಮಾನಿಸಿ “ನಿಮ್ಮಂತಹ ಮಾನವೀಯ ಅಂತಃಕರಣವುಳ್ಳ ಬಸ್ ಸಿಬ್ಬಂದಿಗಳ ಸಂಖ್ಯೆ ಹೆಚ್ಚಾಗಲಿ ಮತ್ತು ಈ ಪವಿತ್ರ ರಕ್ಷೆಯ ಮೂಲಕ ನಮ್ಮ-ನಿಮ್ಮಲ್ಲಿ ಸಹೋದರತೆಯ ಭಾಂದವ್ಯ ಮೂಡಲಿ ಎಂದು ಹರಸಿ ಹಾರೈಸಿದರು.
ಮಂಡಲ ಅಧ್ಯಕ್ಷರು ರಮೇಶ್ ಕಂಡೆಟ್ಟು, ಮಹಿಳಾ ಮೋರ್ಚಾದ ಅಧ್ಯಕ್ಷೆ ಪೂರ್ಣಿಮಾ ರಾವ್, ಪ್ರಧಾನ ಕಾರ್ಯದರ್ಶಿ ಶಬರಿ ಶೆಟ್ಟಿ, ಮಂಡಲ ಉಪಾಧ್ಯಕ್ಷರಾದ ದೀಪಕ್ ಪೈ, ವಿನೋದ್ ಮೆಂಡನ್, ಯುವ ಮೋರ್ಚಾ ಅಧ್ಯಕ್ಷರಾದ ಅಶ್ವಿತ್ ಕೊಟ್ಟಾರಿ, ಮನಪಾ ಸದಸ್ಯರಾದ ರೇವತಿ ಶೆಟ್ಟಿ, ರೂಪಶ್ರೀ, ಲೀಲಾವತಿ ಪ್ರಕಾಶ್, ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗು ಪ್ರಭಾರಿ ಸಂಧ್ಯಾ ವೆಂಕಟೇಶ್, ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಬಬಿತ ರವೀಂದ್ರ, ದಕ್ಷಿಣ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಪ್ರವೀಣ್ ನಿಡ್ಡೆಲ್,ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಸದಸ್ಯರು, ಮಹಾ ಶಕ್ತಿ ಕೇಂದ್ರದ ಪದಾಧಿಕಾರಿಗಳು,ಶಕ್ತಿ ಕೇಂದ್ರದ ಪ್ರಮುಖರು ಉಪಸ್ಥಿತರಿದ್ದರು.