FILM
ಗಾಳಿಪಟ ನಟಿಯ ಪೋಟೋಗೆ ಶಾಕ್ ಆದ ಅಭಿಮಾನಿಗಳು…!!

ಬೆಂಗಳೂರು ಮಾರ್ಚ್ 19: ಗಣೇಶ್ ಅಭಿನಯದ ಗಾಳಿಪಟ ಚಿತ್ರದಲ್ಲಿ ಅಭಿನಯಿಸಿದ್ದ ಕನ್ನಡದ ಖ್ಯಾತ ನಟಿ ದೈಸಿ ಬೋಪಣ್ಣ ಅವರ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕನ್ನಡದಲ್ಲಿ ಬ್ಯುಸಿ ಇರುವಾಗಲೇ ಹಿಂದಿ ಚಿತ್ರರಂಗಕ್ಕೆ ತೆರಳಿದ್ದ ನಟಿ ಡೈಸಿ ಬೋಪಣ್ಣ ಬಳಿಕ ಕನ್ನಡ ಚಿತ್ರರಂಗದಿಂದ ದೂರವಾಗಿದ್ದರು, ರಾಮ ಶಾಮ ಭಾಮ, ಕ್ರೇಜಿ ಲೋಕ, ಐಶ್ವರ್ಯ, ತವರಿನ ಸಿರಿ, ಗಾಳಿಪಟ ಸೇರಿದಂತೆ ಹಲವು ಸಿನಿಮಾ ನಟಿಸಿದ ಕೊಡಗಿನ ಕುವರಿ ಡೈಸಿ ಬೋಪಣ್ಣ ಚಿತ್ರರಂಗದಿಂದ ದೂರಯುಳಿದ್ದಾರೆ. ಉದ್ಯಮಿ ಅಮಿತ್ ಜಾಜು 2011ರಲ್ಲಿ ಮದುವೆಯಾದರು. ಮದುವೆ, ಸಂಸಾರ ಎಂದು ಬ್ಯುಸಿಯಿರುವ ನಟಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ.

ಡೈಸಿ ಬೋಪಣ್ಣ ಅವರು ಈಗ ಹೊಸ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ. ಟಾಪ್ ತೆಗೆದು ಗುಲಾಬಿ ಹಿಡಿದು ಕ್ಯಾಮೆರಾ ಮುಂದೆ ಗಾಳಿಪಟ ನಟಿ ಬಂದಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಲೈಟ್ ಪಿಂಕ್ ಕಲರ್ ರೋಸ್‌ಗಳನ್ನು ಹಿಡಿದು ಡೈಸಿ ಪೋಸ್ ಕೊಟ್ಟಿದ್ದಾರೆ. ನಟಿ ಕೂದಲನ್ನು ಫ್ರೀಯಾಗಿ ಬಿಟ್ಟು ಸಖತ್ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ.