LATEST NEWS
ಓಖೀ ಅಬ್ಬರ, ಮಂಗಳೂರಿನ ಎರಡು ಸರಕು ನೌಕೆಗಳು ಲಕ್ಷದ್ವೀಪದ ಬಳಿ ಮುಳುಗಡೆ
ಓಖೀ ಅಬ್ಬರ, ಮಂಗಳೂರಿನ ಎರಡು ಸರಕು ನೌಕೆಗಳು ಲಕ್ಷದ್ವೀಪದ ಬಳಿ ಮುಳುಗಡೆ
ಮಂಗಳೂರು, ಡಿಸೆಂಬರ್ 02 : ಒಖೀ ಪ್ರಭಾವ ಪಶ್ಚಿಮ ಕರಾವಳಿಗಗೂ ಅಪ್ಪಳಿಸಿದ್ದು, ಅರಬ್ಬೀ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು, ತೀರ ಪ್ರದೇಶಗಳಲ್ಲಿ ಭಾರಿ ವೇಗದಲ್ಲಿ ಗಾಳಿ ಬೀಸುತ್ತಿದೆ.
ನೆರೆ ರಾಜ್ಯ ಕೇರಳದ ಕಾಸರಗೋಡು ಸೇರಿದಂತೆ ಕರಾವಳಿ ಭಾಗದಲ್ಲಿ ಓಖೀ ಚಂಡಮಾರುತದ ಹಿನ್ನೆಯಲ್ಲಿ ನಿನ್ನೆ ರಾತ್ರಿ ಭಾರಿ ಗುಡುಗು ಗಾಳಿ ಸಹಿತ ಮಳೆಯಾಗಿದೆ ಎಂದು ವರದಿಯಾಗಿದೆ.
ಮಂಗಳೂರಿನಿಂದ ಸಮುದ್ರಕ್ಕೆ ಮೀನುಗಾಕೆಗೆ ತೆರಳಿದ ಮೀನುಗಾರರು ತೂಫಾನಿನ ಹಿನ್ನೆಲೆಯಲ್ಲಿ ಬಂದರಿಗೆ ಹಿಂದಿರುಗುತ್ತಿದ್ದಾರೆ.
ಮುಂದಿನ 24 ಗಂಟೆಗಳಲ್ಲಿ ಕರಾವಳಿ ಭಾಗದಲ್ಲೂ ಭಾರಿ ಗಾಳಿಯೊಂದಿಗೆ ಮಳೆ ಬರುವ ಸಾಧ್ಯತೆಗಳಿವೆ.
ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳಲಿವೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಕಂದಾಯ ಪೃಕೃತಿಕ ವಿಕೋಪ ಮುನ್ನಚ್ಚರಿಕಾ ಇಲಾಖೆ ಸೂಚನೆ ನೀಡಿದೆ.
ಈ ನಡುವೆ ಮಂಗಳೂರು ಹಳೇ ಬಂದರಿನಿಂದ ಲಕ್ಷ ದ್ವೀಪಕ್ಕೆ ಸರಕು ಸಾಗಿಸುತ್ತಿದ್ದ ಎರಡು ಸರಕು ನೌಕೆಗಳು ಬೀರುಗಳಿಗೆ ಸಿಲುಕಿ ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾಗಿವೆ.
ಮಂಗಳೂರಿನ ಹಳೆಯ ಬಂದರಿನಿಂದ ಸರಕು ಹೊತ್ತು ಸಾಗುತ್ತಿದ್ದ ಎರಡು ಹಡಗುಗಳು ಲಕ್ಷ ದ್ವೀಪದ ಕಡಮತ್ತಿ ಬಳಿ ಈ ನೌಕೆಗಳು ಮುಳುಗಿವೆ.
ಇನ್ನೊಂದು ಹಡಗೂ ಅಪಾಯದ ಭೀತಿಯಲ್ಲಿದೆ. ಹಡಗಿನಲ್ಲಿದ್ದವರನ್ನು ರಕ್ಷಣೆ ಮಾಡಲಾಗಿದೆ ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ಮಂಗಳೂರಿನ ಹಳೆ ಬಂದರಿನಿಂದ ಸಿಮೆಂಟ್, ಜಲ್ಲಿ, ಕಲ್ಲು ಹಾಗೂ ತರಕಾರಿಗಳನ್ನು ಹೊತ್ತು ಈ ನೌಕೆಗಳು ಲಕ್ಷದ್ವೀಪದತ್ತ ಪ್ರಯಾಣ ಹೊರಟಿದ್ದುವು.
ಈ ಬಗ್ಗೆ ಲಕ್ಷದ್ವೀಪದ ಆಡಳಿತದಿಂದ ಮಾಹಿತಿ ಕೇಳಲಾಗಿದೆ ಎಂದು ಕರಾವಳಿ ಕಾವಲು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.