LATEST NEWS
ಮುಂಬೈಯಲ್ಲಿ ಓಖೀ ಪ್ರತಾಪ : ಭಾರಿ ಮಳೆ.ಕಟ್ಟೆಚ್ಚರ ಘೋಷಣೆ
ಮುಂಬೈಯಲ್ಲಿ ಓಖೀ ಪ್ರತಾಪ : ಭಾರಿ ಮಳೆ.ಕಟ್ಟೆಚ್ಚರ ಘೋಷಣೆ
ಮುಂಬಯಿ, ಡಿಸೆಂಬರ್ 05 : ಓಖೀ ಚಂಡಮಾರುತ ಮುಂಬೈ ಕರಾವಳಿಯಲ್ಲಿ ತನ್ನ ಪ್ರತಾಪ ತೋರಿಸಲು ಆರಂಭಿಸಿದೆ. ಮುಂಬೈ ನಗರಿಯಲ್ಲಿ ಗಾಳಿಯೊಂದಿಗೆ ಭಾರಿ ಮಳೆಯಾಗುತ್ತಿದೆ.
ಗಾಳಿಯ ತೀವ್ರ ಪ್ರತಾಪ ಮತ್ತು ಅಕಾಲಿಕ ಮಳೆಯಿಂದಾಗಿ ಮುಂಬೈ ನಲುಗುತ್ತಿದೆ.
ಒಖೀ ಚಂಡಮಾರುತದ ಪ್ರಭಾವ ಇನ್ನೂ ಒಂದೆರಡು ದಿನ ಇರುವ ಕಾರಣ ಮಹಾರಾಷ್ಟ್ರದ ಹಲವೆಡೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮುಂಬಯಿಯಲ್ಲಿ ಶಾಲೆ -ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಚಂಡಮಾರುತ ಅಪ್ಪಳಿಸುವ ಬಗ್ಗೆ ಈಗಾಗಲೇ ಮುನ್ನೆಚ್ಚರಿಕೆಯನ್ನು ನೀಡಿದೆ.
ಪ್ರಮುಖ ಸಮುದ್ರ ಮಾರ್ಗವಾದ ಬಾಂದ್ರಾ -ವರ್ಲಿ ಸೀ ಲಿಂಕ್ ನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಭಾರಿ ಗಾತ್ರದ ಅಲೆಗಳು ಇಲ್ಲಿನ ಎಕ್ಸ್ ಪ್ರೆಸ್ ಹೈವೇ ಮೇಲೆ ಬೀಸುತ್ತಿದ್ದು, ಭಯಾನಕ ಪರಿಸ್ಥಿತಿ ಸಿರ್ಮಾಣವಾಗಿದೆ.
ಅರಬ್ಬಿ ಸಮುದ್ರದಲ್ಲಿ ಭಯಾನಕ ರೀತಿಯಲ್ಲಿ ಭಾರಿ ಗಾತ್ರದ ಎತ್ತರೆತ್ತರದ ಅಲೆಗಳು ಏಳುತ್ತಿರುವ ಕಾರಣ ಸಮುದ್ರ ಬದಿಗೆ ಯಾರು ಕೂಡ ಹೋಗಕೂಡದು ಎಂದು ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೊರೇಶನ್ ನ ನೈಸರ್ಗಿಕ ಪ್ರಕೋಪ ನಿರ್ವಹಣಾ ಘಟಕ ಜನರಿಗೆ ಎಚ್ಚರಿಕೆ ನೀಡಿದೆ.
ಚಂಡಮಾರುತ ಅಪ್ಪಳಿಸಿದಲ್ಲಿ ವ್ಯಾಪಕ ನಾಶ, ನಷ್ಟ, ಸಂಭಾವ್ಯ ಜೀವಹಾನಿಯ ಸಾಧ್ಯತೆಗಳ ಬಗ್ಗೆ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಈ ನಡುವೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ತಮ್ಮ ರಾಲಿಗಳನ್ನು ಚಂಡಮಾರುತದ ಕಾರಣ ಮೊಟಕು ಗೊಳಿಸಿದ್ದಾರೆ.
ವಿಡಿಯೋಗಾಗಿ…
https://youtu.be/osGlhBN3P40