Connect with us

    LATEST NEWS

    ಒಖೀ ಚಂಡಮಾರುತ ರೌದ್ರವತಾರ : 9 ಸಾವು,80 ಕ್ಕೂ ಅಧಿಕ ಮೀನುಗಾರರು ನಾಪತ್ತೆ

     ರೌದ್ರವತಾರ ತಾಳಿದ ಒಖೀ ಚಂಡಮಾರುತ: 9 ಸಾವು,80 ಕ್ಕೂ ಅಧಿಕ ಮೀನುಗಾರರು ನಾಪತ್ತೆ

    ಚನೈ/ಕೊಚ್ಚಿ, ಡಿಸೆಂಬರ್ 01 : ಒಖೀ ಚಂಡಮಾರುತ ರೌದ್ರವತಾರ ತಾಳಿದೆ. ಇದುವರೆಗಿನ ಒಖೀ ಚಂಡಮಾರುತದ ಪ್ರತಾಪಕ್ಕೆ ಕನಿಷ್ಟ 9 ಜನರು ಜೀವಕಳೆದುಕೊಂಡಿದ್ದು, 80 ಕ್ಕೂ ಅಧಿಕ ಮೀನುಗಾರು ಕಾಣೆಯಾಗಿದ್ದಾರೆ.

    ತಮಿಳುನಾಡು, ಕೇರಳ ಹಾಗೂ ಲಕ್ಷ ದ್ವೀಪಗಲಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರತೀಯ ನೌಕ ದಳ ನೆರವಿಗೆ ಧಾವಿಸಿದೆ.

    ಸಂಕಷ್ಟದಲ್ಲಿದ್ದವರ ನೆರವಿಗೆ 5 ಹಡಗುಗಳನ್ನು ಹಾಗೂ ವೈಮಾನಿಕ ಸಮೀಕ್ಷೆಗಾರಿ ವಿಮಾನಗಳನ್ನು ನಿಯುಕ್ತಿಗೊಳಿಸಲಾಗಿದೆ.

    50 ಕ್ಕೂ ಅಧಿಕ ಮೀನುಗಾರ ದೋಣಿಗಳು ಕಾಣೆಯಾಗಿವೆ. ತಮಿಳುನಾಡು ಮತ್ತು ಕೇರಳದ ಕರಾವಳಿ ಪ್ರದೇಶಗಳಲ್ಲಿ ಧಾರಾಕಾರ ಮಳೆ ಮತ್ತು ಗಾಳಿಯಿಂದ ಸಾವಿರಾರು ಜನರು ಸಂಕಷ್ಟದಲ್ಲಿದ್ದು, ಕೋಟ್ಯಾಂತರ ಮೌಲ್ಯದ ಆಸ್ತಿ ಪಾಸ್ತಿಗಳ ನಷ್ಟ ಉಂಟಾಗಿದೆ.

    ಕೇರಳ ಮತ್ತು ತಮಿಳುನಾಡು ಕರಾವಳಿಗಳಲ್ಲಿ 33 ಮೀನುಗಾರರನ್ನು ಭಾರತೀಯ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಪಾರುಮಾಡಿದೆ ಎಂದು ಕೇರಳ ಮೀನುಗಾರಿಕಾ ಸಚಿವ ಜೆ ಮರ್ಸಿಕುಟ್ಟಿ ಹೇಳಿದ್ದಾರೆ.

    ಇತರ ಕಾಣೆಯಾದ ಮೀನುಗಾರರನ್ನು ರಕ್ಷಿಸಲು ಶೋಧ ಕಾರ್ಯಾಚರಣೆ ಮುಂದುವರೆದಿದೆ.

    ಓಖೀ ಚಂಡಮಾರುತದ ಬಿರುಗಾಳಿಯ ತೀವ್ರತೆ ಹೆಚ್ಚಾಗಿದ್ದು ಮಿನಿಕೊಯ್ ದ್ವೀಪದ 110 ಕಿಲೋಮೀಟರ್ ಈಶಾನ್ಯದಲ್ಲಿದೆ ಮತ್ತು ಮುಂದಿನ 24 ಗಂಟೆಗಳಲ್ಲಿ ಲಕ್ಷದ್ವೀಪವನ್ನು ದಾಟುವ ಸಾಧ್ಯತೆ ಇದೆ ಎಂದುಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

    ಚಂಡಮಾರುತದಿಂದ ಸಾಮಾನ್ಯ ಜೀವನವನ್ನು ಸ್ಥಗಿತಗೊಂಡಿದೆ. ಚೆನ್ನೈ, ಕನ್ಯಾಕುಮಾರಿ, ತೂತುಕೋರಿನ್, ಕಾಂಚೀಪುರಂ, ವಿಲ್ಲುಪುರಾಮ್, ಮಧುರೈ, ಥೇಣಿ, ತಂಜಾವೂರು ಮತ್ತು ತಿರುವಂಕೂರಿನ ಶಾಲೆಗಳನ್ನು ಮುಂಜಾಗೃತಾ ಕ್ರಮವಾಗಿ ಮುಚ್ಚಲಾಗಿದೆ.

    ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ತೊಂದರೆಗೊಳಗಾದ ಪ್ರದೇಶಗಳಲ್ಲಿ ಜನರಿಗೆ ಮಾಡಬೇಕಾದ ಮತ್ತು ಮಾಡಬಾರದ ಪಟ್ಟಿಯನ್ನು ಬಿಡುಗಡೆ ಮಾಡಿದೆ ಮತ್ತು ಅಂತಹ ಸಂದರ್ಭಗಳಲ್ಲಿ ಭೀತಿಗೊಳಗಾಗದಂತೆ ಮನವಿ ಮಾಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply