Connect with us

    MANGALORE

    ಸಕ್ಷಮ್ ನ ಅಂಗವಾಗಿ MRPL ನ ಸೈಕಲ್ ರಾಲಿ

    ಸಕ್ಷಮ್ ನ ಅಂಗವಾಗಿ MRPL ನ ಸೈಕಲ್ ರಾಲಿ

    ಮಂಗಳೂರು ಡಿಸೆಂಬರ್ 17: ತೈಲ ಮತ್ತು ಅನಿಲ ಸಂರಕ್ಷಣೆಯ ಮಾಸಿಕ ಕಾರ್ಯಕ್ರಮ ಸಕ್ಷಮ್ ನ ಅಂಗವಾಗಿ ಎಂಆರ್ ಪಿಎಲ್ ಸೈಕಲ್ ರಾಲಿ ಸೈಕ್ಲೋತಾನ್ ನ್ನು ಮಂಗಳೂರಿನಲ್ಲಿ ಆಯೋಜಿಸಿತ್ತು. ಈ ರಾಲಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.

    ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆ (ಪಿಸಿಆರ್ ಎ) ಆಯೋಜಿಸಿರುವ ಸೈಕಲ್ ರಾಲಿ ದೇಶದಾದ್ಯಂತ ಈ ಕಾರ್ಯಕ್ರಮವನ್ನು ಹಮ್ನಿಕೊಂಡಿದೆ. ಈ ಹಿನ್ನಲೆಯಲ್ಲಿ ಇಂದು ಮಂಗಳೂರಿನಲ್ಲಿ ಎಂಆರ್ ಪಿಎಲ್ ವತಿಯಿಂದ ಸೈಕಲ್ ರಾಲಿ ಹಮ್ಮಿಕೊಳ್ಳಲಾಗಿತ್ತು.

    ಪೆಟ್ರೋಲಿಯಂ ಇಂಧನದ ಮಿತ ಬಳಕೆ , ಇಂಧನದ ಸಂರಕ್ಷಣೆ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ವ್ಯರ್ಥಗೊಳಿಸುವ ವಿಚಾರಗಳ ಹಾಗೂ ಸೈಕಲ್ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.

    ಮಂಗಳೂರಿನಲ್ಲಿ ನಡೆದ ಈ ಸೈಕ್ಲೋತಾನ್ ಗೆ ಮಂಗಳೂರು ಬೈಸಿಕಲ್ ಕ್ಲಬ್ ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗ ನೀಡಿದ್ದವು. ಮಂಗಳೂರು ಮಹಾನಗರಪಾಲಿಕೆಯ ಎದುರು ಈ ಸೈಕಲ್ ರಾಲಿ ಆರಂಭಗೊಂಡು ನಗರದ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿತು. ಸೈಕಲ್ ರಾಲಿಯಲ್ಲಿ ನೂರಾರು ವಿಧ್ಯಾರ್ಥಿ ಹಗೂ ಯುವಕರು ಭಾಗವಹಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply