Connect with us

    LATEST NEWS

    ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ಸಾಂಸ್ಕ್ರತಿಕ ವೈಭವ:ಕಿರುತೆರೆ ನಟಿ ತನ್ವಿ ರಾವ್ (ಕೀರ್ತಿ) ಅವರಿಗೆ ಮಕ್ಕಿಮನೆ ಕಲಾವೃಂದದ ಗೌರವ ಪ್ರಶಸ್ತಿ ಪ್ರಧಾನ

    ಮಂಗಳೂರು: – ಮಠದಕಣಿ ಯ ಶ್ರೀ ವೀರಭದ್ರ – ಮಹಾಮಾಯಿ ದೇವಸ್ಥಾನದ ನವರಾತ್ರಿ ಮಹೋತ್ಸವದಲ್ಲಿ ಮಹಾಮಾಯಿ ಫ್ರೆಂಡ್ಸ್ ಎಸೋಸಿಯೇಶನ್ 47ನೇ ವಾರ್ಷಿಕೋತ್ಸವದ ಪ್ರಯುಕ್ತ ಸುದೇಶ್ ಜೈನ್ ಮಕ್ಕಿಮನೆ ಸಂಯೋಜನೆಯಲ್ಲಿ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ಭಾನುವಾರ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು .ನಂತರ ನಡೆದ ಸಭಾ ಕಾರ್ಯಕ್ರಮ ದಲ್ಲಿ ಕಿರುತೆರೆ ನಟಿ, ಭರತನಾಟ್ಯ ಕಲಾವಿದೆ ತನ್ವಿ ರಾವ್ ರವರಿಗೆ ಮಕ್ಕಿಮನೆ ಕಲಾವೃಂದದ ಗೌರವ ಪ್ರಶಸ್ತಿ “ಕರುನಾಡ ಕಲಾ ಸಿರಿ” ಪ್ರಶಸ್ತಿ ಪ್ರಧಾನ ಮಾಡಲಾಯಿತು.

    ಈ ಸಂದರ್ಭದಲ್ಲಿ ಶ್ವೇತಾ ಜೈನ್ ವಕೀಲರು ಮೂಡುಬಿದಿರೆ, ಅಶೋಕ್ ಎ. ಮಂಗಳೂರು, ಸಂಪತ್ ಜೈನ್ ಮುಂಡೂರು, ಬಾಲಕೃಷ್ಣ ಕಲ್ಬಾವಿ, ಲೋಕಯ್ಯ ಶೆಟ್ಟಿಗಾರ, ವಿಶ್ವನಾಥ್ ಶೆಟ್ಟಿಗಾರ , ಸುದೇಶ್ ಜೈನ್ ಮಕ್ಕಿಮನೆ ಮೊದಲಾದವರು ಉಪಸ್ಥಿತರಿದ್ದರು, ಶ್ರಾವ್ಯ ಕಿಶೋರ್ , ಪಾರ್ಥನಾ ರೋಹಿತ್, ರಿಮಾ ಜಗನ್ನಾಥ್ , ವಂಸತ್ ನಾಯ್ಕ್, ಆಶಿಶ್ ಅಂಚನ್ ಅವರನ್ನು ಸನ್ಮಾನಿಸಲಾಯಿತು.

    ಶ್ರೇಯಾ ದಾಸ್ ಹಾಗೂ ಅರ್ಚಿತ್ ಜೈನ್ ನಿರೂಪಿಸಿದರು. ಗೌರವ್ ಶೆಟ್ಟಿಗಾರ, ಕೃತಿ ಸನಿಲ್, ಪೆರಣಾ ಜೆ, ಶ್ರೇಯಾ ಭಟ್ , ಅಪೇಕ್ಷಾ ಎ , ಸಾನಿಧ್ಯ ಜೈನ್ , ನಯನಾ ಮೊದಲಾದವರು ಸಹಕರಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply