FILM
ಟಿಆರ್ ಪಿ ಗಾಗಿ ಕತ್ತೆ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ…!
ಮುಂಬೈ ಅಕ್ಟೋಬರ್ 08: ಹಿಂದಿಯಲ್ಲಿ ಖ್ಯಾತ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ರಿಯಾಲಿಟಿ ಶೋಗೆ ಇದೀಗ ಕತ್ತೆ ಎಂಟ್ರಿಕೊಟ್ಟಿದೆ. ಬಿಗ್ ಬಾಸ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸಾಕು ಪ್ರಾಣಿಯೊಂದನ್ನು ಮನೆಗೆ ಕಳುಹಿಸಲಾಗಿದೆ. ಒಟ್ಟು 19 ಕಂಟೆಸ್ಟೆಂಟ್‌ಗಳ ಪೈಕಿ ಕತ್ತೆ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದೆ.
ಬಿಗ್ ಬಾಸ್ ಹಿಂದಿ ಟಿಆರ್ ಪಿ ಅಷ್ಟೇನು ಒಳ್ಳೆ ರೀತಿಯಲ್ಲಿ ಇಲ್ಲ. ಹೀಗಾಗಿ ವಿಭಿನ್ನ ರೀತಿಯಲ್ಲಿ ಟಿಆರ್ ಪಿ ಗಾಗಿ ಸರ್ಕಸ್ ಮಾಡುತ್ತಾ ಇರುತ್ತಾರೆ. ಸಲ್ಮಾನ್ ಖಾನ್ ನಡೆಸಿಕೊಡುವ ಕಾರ್ಯಕ್ರಮವಾದರೂ ಕೂಡ ಸರಿಯಾದ ಟಿಆರ್ ಪಿ ಇಲ್ಲ.
ಈ ಹಿನ್ನಲೆ ಇದೀಗ ಹಿಂದಿ ಬಿಗ್ ಬಾಸ್ ಗೆ ಕತ್ತೆ ಎಂಟ್ರಿ ಕೊಟ್ಟಿದೆ. ಸಲ್ಮಾನ್ ಖಾನ್ (Salman Khan) ನಿರೂಪಣೆಯ ‘ಬಿಗ್ ಬಾಸ್ ಸೀಸನ್ 18’ರ ಶೋನಲ್ಲಿ ಈ ಕತ್ತೆ (Donkey) ಎಂಟ್ರಿ ಕೊಟ್ಟಿದೆ. ವೇದಿಕೆಗೆ 19ನೇ ಸ್ಪರ್ಧಿಯಾಗಿ ಬಂದ ಕತ್ತೆ ಗಧರಾಜ್ ಅನ್ನು ನೋಡಿದ ವೀಕ್ಷಕರು ಫುಲ್ ಶಾಕ್ ಆಗಿದ್ದಾರೆ.
You must be logged in to post a comment Login