LATEST NEWS
ತಾಂತ್ರಿಕ ದೋಷದಿಂದ ಇಒಎಸ್-3(EOS-3) ಉಪಗ್ರಹ ಕಕ್ಷೆಗೆ ತಲುಪುವ ಮೊದಲೇ ವಿಫಲ!
ಆಂಧ್ರಪ್ರದೇಶ ಅಗಸ್ಟ್ 12: ಶ್ರೀ ಹರಿಕೋಟಾದಿಂದ ಇಂದು ಬೆಳಿಗ್ಗೆ ಉಡಾವಣೆಯಾಗಿದ್ದ ಭೂಮಿಯನ್ನು ಅವಲೋಕಿಸುವ ಉಪಗ್ರಹ ಇಒಎಸ್-3(EOS-3) ಕಕ್ಷೆಗೆ ತಲುಪುವ ಮೊದಲೇ ತಾಂತ್ರಿಕ ಕಾರಣದಿಂದ ವಿಫಲಗೊಂಡಿದೆ.
ಇಒಎಸ್-3 ಉಪಗ್ರಹ ಇಂದು ಬೆಳಿಗ್ಗೆ 5.45ಕ್ಕೆ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಉಡಾವಣೆಯಾಗಿತ್ತು. ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡರೂ ತಾಂತ್ರಿಕ ಕಾರಣದಿಂದ ತನ್ನೊಳಗಿದ್ದ ಸೆಟಿಲೈಟನ್ನು ನಿಗದಿತ ಜಾಗಕ್ಕೆ ತಲುಪಿಸಲು ವಿಫಲಗೊಂಡಿದೆ. ಕ್ರಯೋಜನಿಕ್ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದೆ ವೈಫಲ್ಯಕ್ಕೆ ಕಾರಣ ಎಂದು ತಿಳಿದುಬಂದಿದೆ.
ಇಒಎಸ್-3 ಉಪಗ್ರಹವು ಪ್ರವಾಹ, ಚಂಡಮಾರುತ ಸೇರಿ ಪ್ರಾಕೃತಿಕ ವಿಕೋಪಗಳನ್ನು ಮುಂಚಿತವಾಗಿ ಗ್ರಹಿಸಲು ಭೂಮಿಯ ಚಲನೆಯನ್ನು ಅವಲೋಕಿಸುವ ಉದ್ದೇಶವನ್ನು ಹೊಂದಿತ್ತು. ಇದನ್ನು ಜಿಯೋಸಿಂಕ್ರೋನಸ್ ಸೆಟಲೈಟ್ ಲಾಂಚ್ ವೆಹಿಕಲ್-ಎಫ್10 ಮೂಲಕ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಎಸ್‌ಡಿಎಸ್‌ಸಿಯ 2ನೇ ಲಾಂಚ್‌ಪ್ಯಾಡ್‌ನಿಂದ ಹೊತ್ತೊಯ್ದಿತ್ತು.
ಬೆಳಗ್ಗೆ ನಿಗದಿಯಂತೆ 5:43ಕ್ಕೆ ಜಿಯೋ ಸಿಂಕ್ರೋನಸ್ ಸೆಟಿಲೈಟ್ ಲಾಂಚ್ ವೆಹಿಕಲ್ ತಂತ್ರಜ್ಞಾನದ 51.70 ಮೀಟರ್ ಎತ್ತರದ ಎಫ್10 ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಯಿತು. ಅದಾದ ಬಳಿಕ ಮೊದಲ ಹಾಗೂ ಎರಡನೇ ಹಂತವೂ ಯಶಸ್ವಿಯಾಗಿ ನಡೆಯಿತು. ಆದರೆ, ತಾಂತ್ರಿಕ ದೋಷದಿಂದಾಗಿ ಕ್ರಯೋಜೆನಿಕ್ ಎಂಜಿನ್ನ ಮೇಲಿನ ಮಟ್ಟದಲ್ಲಿ ನಿಶ್ಚಿತ ರೀತಿಯಲ್ಲಿ ಕಿಡಿ (ignition) ಉರಿಯಲಿಲ್ಲ. ಹೀಗಾಗಿ, ಸೆಟಿಲೈಟನ್ನು ನಿಗದಿತ ಕಕ್ಷೆಗೆ ಸೇರಿಸಲು ರಾಕೆಟ್ ವಿಫಲಗೊಂಡಿದೆ ಎಂದು ಇಸ್ರೋ ತಿಳಿಸಿದೆ.