Connect with us

    DAKSHINA KANNADA

    ವಿಧ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಆರೋಪಿ ಶಿಕ್ಷಕನ ಪದಚ್ಯುತಿಗೆ ಆಗ್ರಹಿಸಿ ಸುಬ್ರಹ್ಮಣ್ಯದಲ್ಲಿ ಪ್ರತಿಭಟನೆ

    ಪುತ್ತೂರು ಅಗಸ್ಟ್ 11: ಪಾಠ ಹೇಳಿಕೊಡುವ ನೆಪದಲ್ಲಿ ಅಪ್ರಾಪ್ತ ವಿಧ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರವೆಸಗಿದ ಕಾಮುಕ ಶಿಕ್ಷಕನ ಪದಚ್ಯುತಿಗೊಳಿಸಬೇಕೆಂದು ಆಗ್ರಹಿಸಿ ಸಾರ್ವಜನಿಕರು ಸುಬ್ರಹ್ಮಣ್ಯದಲ್ಲಿ ಪ್ರತಿಭಟನೆ ನಡೆಸಿದರು.


    ಸುಬ್ರಹ್ಮಣ್ಯ ಪ್ರೌಢಶಾಲೆಯ ವಿದ್ಯಾರ್ಥಿನಿಯೊಬ್ಬಳನ್ನು ಪಾಠ ಹೇಳಿಕೊಡುವ ನೆಪದಲ್ಲಿ ಶಾಲೆ ಶಿಕ್ಷಕ ಗುರುರಾಜ್ ನಿರಂತರ ಅತ್ಯಾಚಾರವೆಸಗಿದ್ದ ಎಂದು ಆರೋಪಿಸಲಾಗಿದ್ದು, ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ. ಈ ನಡುವೆ ಸ್ಥಳೀಯ ಸಾರ್ವಜನಿಕರು ಆರೋಪಿ ಶಿಕ್ಷಕನನ್ನು ಶಿಕ್ಷಕ ಕೆಲಸದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ ಇಂದು ಪ್ರತಿಭಟನೆ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.


    ಈ ಸಂದರ್ಭ ಆರೋಪಿ ಶಿಕ್ಷಕ ಗುರುರಾಜ್ ಮೇಲೆ ಪೋಲೀಸರು ದುರ್ಬಲ ಸೆಕ್ಷನ್ ಹೇರಿದ್ದಾರೆ ಎಂದು ಪೊಲೀಸರ ವಿರುದ್ಧ ಆರೋಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆರೋಪಿಗೆ ಶಿಕ್ಷಕನಾಗಿ ಮುಂದುವರಿಯುವ ನೈತಿಕತೆಯಿಲ್ಲ , ತಕ್ಷಣವೇ ಸರಕಾರ ಈತನನ್ನು ಶಿಕ್ಷಕ ಹುದ್ದೆಯಿಂದ ಪದಚ್ಯುತಿಗೊಳಿಸುವಂತೆ ಒತ್ತಾಯಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply