LATEST NEWS
ಎರಡು ವರ್ಷಗಳ ಬಳಿಕ ಮಂಗಳೂರು ಬಂದರಿಗೆ ಬಂದ ಐಷಾರಾಮಿ ಹಡಗು….!!
ಮಂಗಳೂರು ನವೆಂಬರ್ 29: ಮಂಗಳೂರು ನವಮಂಗಳೂರು ಬಂದರಿಗೆ ಈ ಋತುವಿನ ಮೊದಲ ಐಷರಾಮಿ ಹಡಗು ಆಗಮಿಸಿದೆ. ಮಾಲ್ಟಾದಿಂದ ಬಂದಿದ್ದ ‘ಎಂಎಸ್ ಯುರೋಪ–2’ ಹೆಸರಿನ ಹಡಗಿನಲ್ಲಿ 271 ಪ್ರಯಾಣಿಕರು ಹಾಗೂ 373 ಸಿಬ್ಬಂದಿ ಆಗಮಿಸಿದ್ದಾರೆ.
ಹಡಗಿನಲ್ಲಿ ಆಗಮಿಸಿದ್ದ ಪ್ರಯಾಣಿಕರಿಗೆ ಎನ್ಎಂಪಿಎ ದಲ್ಲಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು, ಹಡಗಿನಲ್ಲಿ ಬಂದಿದ್ದ ಪ್ರವಾಸಿಗರು ಸೇಂಟ್ ಅಲೋಶಿಯಸ್ ಕಾಲೇಜು, ಕದ್ರಿ ಹಾಗೂ ಕುದ್ರೋಳಿ ದೇವಸ್ಥಾನ, ಮಂಗಳೂರಿನ ಮಾರುಕಟ್ಟೆ, ಉಡುಪಿ ಕೃಷ್ಣ ಮಠ, ಮೂಡುಬಿದಿರೆಯ ಸಾವಿರ ಕಂಬದ ಬಸದಿ ಫಿಜಾ ಮಾಲ್ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದರು.
ಸಂಜೆ 3 ಗಂಟೆಗೆ ಹಡಗು ಇಲ್ಲಿಂದ ಕೊಚ್ಚಿಗೆ ಪ್ರಯಾಣ ಬೆಳೆಸಿತು. ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಪ್ರವಾಸಿ ಹಡುಗಳ ಭೇಟಿ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ದೀರ್ಘ ಅವಧಿಯ ಬಳಿಕ, ಈ ಋತುವಿನಲ್ಲಿ ಮತ್ತೆ ವಿದೇಶಿ ಪ್ರಯಾಣಿಕರು ನಗರಕ್ಕೆ ಭೇಟಿ ನೀಡಿದ್ದಾರೆ.