Connect with us

    KARNATAKA

    ಬೆಂಗಳೂರು – ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ – ಇಬ್ಬರು ಅರೆಸ್ಟ್

    ಬೆಂಗಳೂರು: ರಾಪಿಡೋ ಬುಕ್ ಮಾಡಿ ಮನೆಗೆ ಹೊರಟಿದ್ದ ಯುವತಿಯ ಮೇಲೆ ರಾಪಿಡೋ ಬೈಕ್ ಸವಾರ ಹಾಗೂ ಆತನ ಸ್ನೇಹಿತ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಎಲೆಕ್ಟ್ರಾನಿಕ್​ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


    ನಿನ್ನೆ ರಾತ್ರಿ ಯುವತಿ ರ‍್ಯಾಪಿಡೋ ಬೈಕ್ ಬುಕ್ ಮಾಡಿದ್ದಳು. ಈ ವೇಳೆ ರ‍್ಯಾಪಿಡೋ ಬೈಕ್ ಸವಾರ ಯುವತಿಯನ್ನು ಬಿಟಿಎಂ ಲೇಔಟ್​ನಿಂದ ಪಿಕ್​ ಮಾಡಿ ಎಲೆಕ್ಟ್ರಾನಿಕ್​ಸಿಟಿಯಲ್ಲಿರುವ ಆಕೆಯ ಮನೆಗೆ ಡ್ರಾಪ್​ ಮಾಡಬೇಕಿತ್ತು. ಆದ್ರೆ ಯುವತಿ ಕುಡಿದ ನಶೆಯಲ್ಲಿರುವುದನ್ನು ಗಮನಿಸಿ ಆಕೆಯನ್ನು ಮನೆಗೆ ಬಿಡುವ ಬದಲು ರೂಮ್​ಗೆ ಕರೆದೊಯ್ದಿದ್ದಿದ್ದಾನೆ. ಯುವತಿಯನ್ನು ತನ್ನ ರೂಮ್​ಗೆ ಕರೆದೊಯ್ದು ರ‍್ಯಾಪಿಡೋ ಬೈಕ್ ಸವಾರ ಮತ್ತು ಆತನ ಸ್ನೇಹಿತ ಅತ್ಯಾಚಾರವೆಸಗಿದ್ದಾರೆ. ಘಟನೆ ಬಗ್ಗೆ ಎಲೆಕ್ಟ್ರಾನಿಕ್​ಸಿಟಿ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದ್ದು ರ‍್ಯಾಪಿಡೋ ಬೈಕ್ ಸವಾರ ಶಹಾಬುದ್ದೀನ್ ಮತ್ತು ಆತನ ಸ್ನೇಹಿತ ಅಖ್ತರ್​ ಹಾಗೂ ಅತ್ಯಾಚಾರ ನಡೆದರೂ ಏನೂ ಮಾಡದೆ ರೂಮಿನಲ್ಲಿದ್ದ ಯುವತಿಯನ್ನು ಪೊಲೀಸರು​ ವಶಕ್ಕೆ ಪಡೆದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply