Connect with us

LATEST NEWS

ಮಂಗಳೂರು ವಿಮಾನ ನಿಲ್ದಾಣದಲ್ಲಿ 1.69 ಕೋಟಿ ಮೌಲ್ಯದ ವಜ್ರ ವಶಕ್ಕೆ

ಮಂಗಳೂರು ಮೇ 28: ಅಕ್ರಮ ಚಿನ್ನ ಸಾಗಾಟ ಹೆಚ್ಚಾಗಿ ನಡೆಯುತ್ತಿದ್ದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಕೋಟ್ಯಾಂತರ ಮೌಲ್ಯದ ವಜ್ರವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ ಘಟನೆ ನಡೆದಿದ್ದು, ಪ್ರಯಾಣಿಕನೊಬ್ಬನಿಂದ 1.69 ಕೋಟಿ ರೂ.ಮೌಲ್ಯದ ವಜ್ರದ ಹರಳುಗಳನ್ನು ಜಪ್ತಿ ಮಾಡಲಾಗಿದೆ.


ದುಬೈಗೆ ಇದೇ 25ರಂದು ತೆರಳಬೇಕಿದ್ದ ಪ್ರಯಾಣಿಕ, ವಜ್ರಗಳನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದು, ಆತನನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಕಸ್ಟಮ್ಸ್ ಇಲಾಖೆ ತಿಳಿಸಿದೆ.

ದುಬೈಗೆ ತೆರಳಲಿದ್ದ ಪ್ರಯಾಣಿಕನನ್ನು ಸಿಐಎಸ್ಎಫ್ ಸಿಬ್ಬಂದಿ ತಪಾಸಣೆ ನಡೆಸುವಾಗ ಆತನ ಪ್ಯಾಂಟ್ ಒಳಗೆ ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದ ಎರಡು ಪೊಟ್ಟಣಗಳಲ್ಲಿ ಹರಳುಗಳಿದ್ದುದು ಕಂಡುಬಂತು. ಆ ಎರಡು ಪೊಟ್ಟಣಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅದರೊಳಗೆ 13 ಸಣ್ಣ ಪೊಟ್ಟಣಗಳಲ್ಲಿ ವಜ್ರದ ಹರಳುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದುದು ಪತ್ತೆಯಾಗಿತ್ತು. ಭದ್ರತಾ ಸಿಬ್ಬಂದಿ ಕಾಸರಗೋಡಿನ ಆ ಪ್ರಯಾಣಿಕನನ್ನು ವಶಕ್ಕೆ ಪಡೆದು, ಕಸ್ಟಮ್ಸ್ ಅಧಿಕಾರಿಗಳ ಸುಪರ್ದಿಗೆ ಒಪ್ಪಿಸಿದ್ದರು.
ಎರಡು ಪೌಚ್‌ಗಳಲ್ಲಿ ಒಟ್ಟು 306.21 ಕ್ಯಾರೆಟ್‌ಗಳಷ್ಟು ತೂಕದ ವಿವಿಧ ಗಾತ್ರದ ವಜ್ರಗಳೊಂದಿಗೆ 13 ಚಿಕ್ಕ ಪ್ಯಾಕೆಟ್‌ಗಳು ಕಂಡುಬಂದಿದ್ದು, ಇದರ ಮೌಲ್ಯ ರೂ.1.69 ಕೋಟಿಯಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *