DAKSHINA KANNADA
ಪೊಸ್ರಾಲು ಬಳಿ ಶಾಂಭವಿ ನದಿಯಲ್ಲಿ ಮೊಸಳೆ
ಪೊಸ್ರಾಲು ಬಳಿ ಶಾಂಭವಿ ನದಿಯಲ್ಲಿ ಮೊಸಳೆ
ಮಂಗಳೂರು ಮೇ17: ಮುಂಡ್ಕೂರು ಗ್ರಾಮದ ಪೊಸ್ರಾಲು ಬಳಿಯ ಶಾಂಭವಿ ನದಿಯಲ್ಲಿ ಮೊಸಳೆಗಳು ಕಂಡು ಬಂದಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ. ಶಾಂಭವಿ ನದಿಗೆ ಸಂಕಲಕರಿಯದಲ್ಲಿ ಹಾಕಲಾದ ಅಣೆಕಟ್ಟಿನ ಸಮೀಪ ಈಗ ನೀರಿನ ಪ್ರಮಾಣ ಕಡಿಮೆಯಾಗಿದ್ದು ಈ ಹಿನ್ನಲೆಯಲ್ಲಿ ಮೊಸಳೆಗಳು ಸ್ಥಳೀಯರಿಗೆ ಕಾಣಸಿಕ್ಕಿವೆ.
ಈ ಹಿನ್ನಲೆಯಲ್ಲಿ ಪರಿಸರದ ಜನರು ಭಯಭೀತರಾಗಿದ್ದಾರೆ. ಇಲ್ಲಿನ ಕೃಷಿಕರು ವ್ಯವಸಾಯಕ್ಕಾಗಿ ಶಾಂಭವಿ ನದಿಯ ನೀರನ್ನು ಅವಲಂಬಿಸಿದ್ದು, ಗದ್ದೆಗೆ ಪಂಪು ನೀರು ಹಾಯಿಸಲು ನದಿಗೆ ಹೋದ ಸಂದರ್ಭ ಮೊಸಳೆಗಳನ್ನು ಕಂಡಿದ್ದಾರೆ.
ಈ ಹಿಂದಿನ ವರ್ಷಗಳಲ್ಲಿ ಕಾಣಿಸದ ಮೊಸಳೆಗಳು ನದಿಗೆ ಹೇಗೆ ಬಂದವು ಎಂಬ ಬಗ್ಗೆ ಜನರಲ್ಲಿ ಸಂಶಯ ಮೂಡಿದೆ. ಈ ಭಾಗದ ಜನರು ಬಟ್ಟೆ ಒಗೆಯಲು, ದನ ತೊಳೆಯಲು ಅದಲ್ಲದೆ ಮಕ್ಕಳು ಈಜಾಡಲು ನದಿಗೆ ಬರುತ್ತಿದ್ದು ಅಪ್ಪಿತಪ್ಪಿ ನೀರಿಗಿಳಿದರೆ ಮೊಸಳೆಗಳಿಗೆ ಆಹಾರವಾಗುವ ಸಾಧ್ಯತೆ ಇದ್ದು ತತ್ ಕ್ಷಣವೇ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಂಡು ಮೊಸಳೆಗಳನ್ನು ಹಿಡಿದು ಸ್ಥಳಾಂತರಿಸಬೇಕೆಂದು ಆಗ್ರಹಿಸಿದ್ದಾರೆ.