LATEST NEWS
ಕೊನೆಗೂ ಒಲಂಪಿಕ್ಸ್ ಗೆ ಕ್ರಿಕೆಟ್ ಎಂಟ್ರಿ – 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ ನಲ್ಲಿ ಟಿ20 ಹಂಗಾಮಾ

ಮುಂಬೈ ಅಕ್ಟೋಬರ್ 16: ಬರೋಬ್ಬರಿ 123 ವರ್ಷಗಳ ಬಳಿಕ ಕ್ರಿಕೆಟ್ ಒಲಂಪಿಕ್ಸ್ ಗೆ ಎಂಟ್ರಿ ಪಡೆದಿದೆ. 2028ರಲ್ಲಿ ಅಮೇರಿಕಾದ ಲಾಸ್ ಏಂಜಲಿಸ್ ನಲ್ಲಿ ನಡೆಯಲಿರುವ ಒಲಂಪಿಕ್ಸ್ ನಲ್ಲಿ ಟಿ20 ಕ್ರಿಕೆಟ್ ಇರಲಿದೆ.
ಜಿಯೊ ವರ್ಲ್ಡ್‌ಸಿಟಿಯಲ್ಲಿ ಈ ಮೂರು ದಿನಗಳ ಒಲಂಪಿಕ್ಸ್ ನ ಅಧಿವೇಶನ ನಡೆದಿದೆ. ಐಒಸಿಯ ಕಾರ್ಯಕಾರಿ ಮಂಡಳಿ ಮಾಡಿದ ಶಿಫಾರಸುಗಳಿಗೆ ಧ್ವನಿಮತದ ಮೂಲಕ ಒಪ್ಪಿಗೆ ಪಡೆದ ನಂತರ ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಅವರು ಒಲಿಂಪಿಕ್ಸ್‌ಗೆ ಕ್ರಿಕೆಟ್ ಮತ್ತು ಇತರ ಆಟಗಳ ಸೇರ್ಪಡೆಯನ್ನು ಘೋಷಿಸಿದರು.

ಕ್ರಿಕೆಟ್ (ಟಿ–20 ಮಾದರಿ) ಅಟವನ್ನು 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ ಕ್ರೀಡೆಗಳ ಪಟ್ಟಿಗೆ ಸೋಮವಾರ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ.ಚುಟುಕು ಕ್ರಿಕೆಟ್ ಜೊತೆಗೆ, ಸ್ವ್ಕಾಷ್, ಬೇಸ್‌ಬಾಲ್/ ಸಾಫ್ಟ್‌ಬಾಲ್, ಲ್ಯಾಕ್ರೊಸ್ ಮತ್ತು ಫ್ಲ್ಯಾಗ್ ಫುಟ್‌ಬಾಲ್ ಆಟಗಳ ಸೇರ್ಪಡೆಗೂ, ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯು ತನ್ನ 141ನೇ ಅಧಿವೇಶನದಲ್ಲಿ ಅನುಮೋದನೆ ನೀಡಿದೆ. ಈ ಐದು ಆಟಗಳ ಸೇರ್ಪಡೆಗೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ 99 ಸದಸ್ಯರ ಪೈಕಿ ಇಬ್ಬರಷ್ಟೇ ವಿರೋಧ ಸೂಚಿಸಿದರು.