LATEST NEWS
ಕ್ರಿಕೆಟ್ ಬೆಟ್ಟಿಂಗ್ ದಂಧೆ ಮೇಲೆ ಪೊಲೀಸ್ ದಾಳಿ ಇಬ್ಬರ ಬಂಧನ

ಮಂಗಳೂರು ಅಕ್ಟೋಬರ್ 1: ಕ್ರಿಕೆಟ್ ಬೆಟ್ಟಿಂಗ್ ದಂಧೆ ಮೇಲೆ ಪೊಲೀಸ್ ದಾಳಿ ನಡೆಸಿ ಇಬ್ಬರು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರ ಪಿಎಂ ರಾವ್ ರಸ್ತೆಯಲ್ಲಿರುವ ವೆಂಕಟೇಶ್ ಭವನ ಲಾಡ್ಜ್ ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಗಳೂರಿನ ಬಂದರು ಪೊಲೀಸರು ಇಬ್ಬರು ಬಂಧಿಸಿದ್ದು, ಐವರು ಪರಾರಿಯಾಗಿದ್ದಾರೆ.
ಬಂಧಿತರನ್ನು ಹರಿಪ್ರಸಾದ್, ಶಶಿಧರ ಎಂದು ಗುರುತಿಸಲಾಗಿದ್ದು ಆರೋಪಿಗಳು ಕ್ರಿಕೆಟ್ ಬೆಟ್ಟಿಂಗ್ ಆ್ಯಪ್ ಮೂಲಕ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಬಂಧಿತರಿಂದ 1. 20 ಲಕ್ಷ ನಗದು, ಒಂದು ಟಿವಿ, ಆರು ಮೊಬೈಲ್ ವಶಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
