Connect with us

LATEST NEWS

ಡ್ರಗ್ಸ್ ಪ್ರಕರಣ – ಸ್ಯಾಮ್ ಬಂಧನದಿಂದ ಆ್ಯಂಕರ್ ಅನುಶ್ರೀಗೆ ಮತ್ತೆ ಕಂಟಕ ಸಾಧ್ಯತೆ…!!

ಮಂಗಳೂರು ಅಕ್ಟೋಬರ್ 1: ಮಂಗಳೂರು ಡ್ರಗ್ಸ್ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲ ಘಟ್ಟ ತಲುಪಿದ್ದು, ಇಂದು ಮತ್ತೊಬ್ಬ ಕೊರಿಯೋಗ್ರಾಫರ್ ಬಂಧನದೊಂದಿಗೆ ಮತ್ತೆ ಸಿನೆಮಾ ಮಂದಿಯ ಡ್ರಗ್ಸ್ ಲಿಂಕ್ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ. ಈ ನಡುವೆ ಇಂದು ಬಂಧಿತನಾದ ಕೊರಿಯೋಗ್ರಾಫರ್ ಕೂಡ ಪಾರ್ಟಿಗಳಲ್ಲಿ ಆ್ಯಂಕರ್ ಅನುಶ್ರೀಯನ್ನು ನೋಡಿದ್ದಾಗಿ ಹೇಳಿರುವುದು .. ಅನುಶ್ರೀಯನ್ನು ಮತ್ತೆ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.


ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿತನಾಗಿರುವ ನೈಜೀರಿಯಾ ಪ್ರಜೆಗೂ ನಟಿ, ನಿರೂಪಕಿ ಅನುಶ್ರೀ ಪರಿಚಯ ಇದೆ ಎಂದು ಹೇಳಲಾಗಿದ್ದು, ಬೆಂಗಳೂರಿನಲ್ಲಿ ನಡೆದ ಡ್ರಗ್ಸ್‌ ಪಾರ್ಟಿಗಳಲ್ಲಿ ಅನುಶ್ರೀಯನ್ನು ನೋಡಿರುವುದಾಗಿ ಈತ ಹೇಳಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.


ಈ ನಡುವೆ ಇತ್ತೀಚೆಗೆ ಬಂಧಿತಳಾಗಿರುವ ಕಿಶೋರ್ ಗೆಳತಿ ಆಸ್ಕಾಳಿಗೂ ಅನುಶ್ರೀ ಪರಿಚಯವಿದೆ. ಅಲ್ಲದೇ ತರುಣ್‌ ರಾಜ್‌ ಕೂಡ ಅನುಶ್ರೀ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು ಎನ್ನುವ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಅನುಶ್ರೀ ಅವರನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳು ದಟ್ಟವಾಗಿವೆ.


ಬೆಂಗಳೂರು ಮೂಲದ ಕೊರಿಯೋಗ್ರಫರ್‌ ಸ್ಯಾಮ್ ಫರ್ನಾಂಡೀಸ್ ಕೂಡ ನಾನು ಕಿಶೋರ್ ಶೆಟ್ಟಿ ಪಾರ್ಟಿಗಳಲ್ಲಿ ಅನುಶ್ರೀಯನ್ನು ನೋಡಿದ್ದೇನೆ ಎಂದು ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಈತ ಹಲವು ಕಿರುತರೆ ನಟಿಯರ ಹೆಸರನ್ನು ಹೇಳಿದ್ದಾನೆ ಎಂದು ತಿಳಿದು ಬಂದಿದೆ. ನೈಜೀರಿಯಾ ಪ್ರಜೆಯಿಂದ ಮುಂಬೈನಲ್ಲಿದ್ದ ಶಾನ್‌ಗೆ ಡ್ರಗ್ಸ್‌ ಪೂರೈಕೆಯಾಗುತ್ತಿತ್ತು. ಅಲ್ಲಿಂದ ಮೊಹಮ್ಮದ್ ಶಾಕೀರ್‌ ಮೂಲಕ ತರುಣ್‌ರಾಜ್‌, ಕಿಶೋರ್ ಶೆಟ್ಟಿಗೆ ಡ್ರಗ್ಸ್ ಸರಬರಾಜು ಆಗುತ್ತಿತ್ತು ಎನ್ನುವ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Facebook Comments

comments