LATEST NEWS
ಮಳವೂರು ಬಳಿ ರೈಲ್ವೆ ಹಳಿ ಬಳಿ ನಿರ್ಮಿಸಲಾಗಿದ್ದ ತಡೆಗೊಡೆಯಲ್ಲಿ ಬಿರುಕು

ಮಳವೂರು ಬಳಿ ರೈಲ್ವೆ ಹಳಿ ಬಳಿ ನಿರ್ಮಿಸಲಾಗಿದ್ದ ತಡೆಗೊಡೆಯಲ್ಲಿ ಬಿರುಕು
ಮಂಗಳೂರು ಜುಲೈ 7: ಮಂಗಳೂರಿನ ಮಳವೂರು ಬಳಿ ರೈಲ್ವೇ ಇಲಾಖೆ ಹಳಿ ದ್ವಿಗುಣಗೊಳಿಸುವ ಕಾಮಗಾರಿಯಲ್ಲಿ ನಿರ್ಮಿಸಲಾಗಿದ್ದ ತಡೆಗೊಡೆ ಬಿರುಕು ಬಿಟ್ಟಿದೆ.
ಮಳವೂರಿನ ರೈಲ್ವೇ ಸೇತುವೆ ಬಳಿ ಹಳಿ ದ್ವಿಗುಣ ಗೊಳಿಸುವ ಕಾಮಗಾರಿಯನ್ನು ಇತ್ತೀಚೆಗೆ ರೈಲ್ವೇ ಇಲಾಖೆ ಕೈಗೆತ್ತಿಕೊಂಡಿತ್ತು. ಆದರೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಭಾರಿ ಬಿರುಕು ಬಿಟ್ಟಿದ್ದು ಅಪಾಯವನ್ನು ಆಹ್ವಾನಿಸುವಂತಿದೆ.

ಪ್ರಸ್ತುತ ಈ ಹೊಸ ಮಾರ್ಗದಲ್ಲಿ ರೈಲು ಓಡಾಟ ಆರಂಭವಾಗಿಲ್ಲ. ಆರಂಭವಾದರೇ ಇಡೀಯ ತಡೆಗೋಡೆ ಕುಸಿದು ಭಾರಿ ಅನಾಹುತಗಳು ಸಂಭವಿಸುವ ಸಾಧ್ಯತೆಗಳಿವೆ.
ಈ ಬಗ್ಗೆ ಸ್ಥಳೀಯರು ರೈಲ್ವೇ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಇದುವರೆಗೆ ಯಾವುದೇ ಕ್ರಮವನ್ನು ರೈಲ್ವೇ ಇಲಾಖೆ ಕೈಗೊಳ್ಳಲಿಲ್ಲ ಎಂದು ಸ್ಥಳಿಯರು ದೂರಿದ್ದಾರೆ.