Connect with us

LATEST NEWS

ನಕ್ಸಲ್ ವಾದಿ ವಿಕ್ರಂ ಗೌಡ ಎನ್‌ ಕೌಂಟರ್ ಪ್ರಕರಣದ ನ್ಯಾಯಾಂಗ ತನಿಖೆಗೆ CPIM ಆಗ್ರಹ…!

ಮಂಗಳವಾರ  ಉಡುಪಿಯಲ್ಲಿ ನಡೆದ ಪೋಲಿಸ್ ದಾಳಿಯಲ್ಲಿ ನಕ್ಸಲ್ ವಾದಿ ವಿಕ್ರಂ ಗೌಡರ ಹತ್ಯೆಯಾಗಿದ್ದು, ಈ ಹತ್ಯೆ ಗುಂಡಿನ ಚಕಮಕಿಯಲ್ಲಿ  ನಡೆದಿದೆ ಎಂದು ಸರ್ಕಾರ ಹೇಳಿದ್ದು ಇದರಲ್ಲಿ ಅನೇಕ ಸಂಶಯಗಳು ಕಾಣುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕರಣದ ನ್ಯಾಯಾಂಗ ತನಿಖೆಗೆ ಸಿಪಿಐಎಂ(CPIM)  ಆಗ್ರಹಿಸಿದೆ.

ಮಂಗಳೂರು : ಮಂಗಳವಾರ  ಉಡುಪಿಯಲ್ಲಿ ನಡೆದ ಪೋಲಿಸ್ ದಾಳಿಯಲ್ಲಿ ನಕ್ಸಲ್ ವಾದಿ ವಿಕ್ರಂ ಗೌಡರ ಹತ್ಯೆಯಾಗಿದ್ದು, ಈ ಹತ್ಯೆ ಗುಂಡಿನ ಚಕಮಕಿಯಲ್ಲಿ  ನಡೆದಿದೆ ಎಂದು ಸರ್ಕಾರ ಹೇಳಿದ್ದು ಇದರಲ್ಲಿ ಅನೇಕ ಸಂಶಯಗಳು ಕಾಣುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕರಣದ ನ್ಯಾಯಾಂಗ ತನಿಖೆಗೆ ಸಿಪಿಐಎಂ(CPIM)  ಆಗ್ರಹಿಸಿದೆ.

50-60 ಜನರ ಸಶಸ್ತ್ರ ಪೋಲೀಸರ ತಂಡಕ್ಕೆ ನಾಲ್ಕು ಜನ ನಕ್ಸಲರ ತಂಡವನ್ನು ಬಂಧಿಸಲಾಗಲಿಲ್ಲವೆ ಎಂಬ ಪ್ರಶ್ನೆ, ಪೋಲೀಸ್ ಕ್ರಮವನ್ನು ಸಂಶಯಿಸಲಾಗುತ್ತಿದೆ. ಆದ್ದರಿಂದ ರಾಜ್ಯದ ಜನತೆ ನಿಜವನ್ನು ತಿಳಿಯುವಂತಾಗಲು ಈ ಪ್ರಕರಣವನ್ನು ಉನ್ನತ ನ್ಯಾಯಾಂಗ ತನಿಖೆಗೊಳಪಡಿಸ ಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ರಾಜ್ಯದ ಮುಖ್ಯಮಂತ್ರಿ ಗಳನ್ನು ಆಗ್ರಹಿಸುತ್ತದೆ. ಆ ಮೂಲಕ ರಾಜ್ಯದ ಜನತೆ ಸತ್ಯವೇನೆಂದು ತಿಳಿಯುವಂತಾಗಬೇಕೆಂದು ಕೋರಿದೆ. ಸುತ್ತುವರೆದು ಬಂಧಿಸಲು ಅವಕಾಶವಿರುವಾಗ ಎನ್ ಕೌಂಟರ್ ಹೆಸರಲ್ಲಿ ಹತ್ಯೆ ಮಾಡುವುದನ್ನು ಸಿಪಿಐಎಂ ಒಪ್ಪುವುದಿಲ್ಲ ಮತ್ತು ಅಂತಹ ದುಷ್ಕೃತ್ಯವನ್ನು ಸಿಪಿಐಎಂ ಬಲವಾಗಿ ಖಂಡಿಸುತ್ತದೆ ಎಂದು ಹೇಳಿದೆ.

ವ್ಯಕ್ತಿಗತ ಹಿಂಸಾತ್ಮಕ ಹಾದಿಯು ಖಂಡಿತಾ ಸಮಾಜದಲ್ಲಿ ಯಾವ ಬದಲಾವಣೆಯನ್ನು ತರಲಾಗದು ಎಂಬುದು ಈಗಾಗಲೇ ಸಾಬೀತಾದ ವಿಚಾರವಾಗಿದೆ. ಆದ್ದರಿಂದ ಇಂತಹ ಚಟುವಟಿಕೆಯಲ್ಲಿ ತೊಡಗಿರುವ ಎಲ್ಲರು ಮುಖ್ಯವಾಹಿನಿಗೆ ಬಂದು ಜನ ಚಳುವಳಿಯಲ್ಲಿ ತೊಡಗಿ ಸಮಾಜದ ಬದಲಾವಣೆಗಾಗಿ ಅಥವಾ ಶೋಷಣೆಯ ವಿರುದ್ದ ಸಕ್ರಿಯರಾಗುವುದೊಂದೆ ಸರಿದಾರಿಯಾಗಿದೆ.ಅದೇ ರೀತಿ, ರಾಜ್ಯ ಸರಕಾರವೂ ಕೂಡಾ, ಇವರನ್ನು ಮುಖ್ಯವಾಹಿನಿಗೆ ತರುವ ಅಗತ್ಯ ನೈಜ ಕ್ರಮಗಳನ್ನು ತೆದುಕೊಳ್ಳವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *