LATEST NEWS
ಪಾಂಡೇಶ್ವರ ದೇವಳದ ಗೋಕಳ್ಳತನ ಪ್ರಮುಖ ಆರೋಪಿ ಬಂಧನ

ಪಾಂಡೇಶ್ವರ ದೇವಳದ ಗೋಕಳ್ಳತನ ಪ್ರಮುಖ ಆರೋಪಿ ಬಂಧನ
ಮಂಗಳೂರು ಜುಲೈ 28: ಪಾಂಡೇಶ್ವರ ಮಹಾಲಿಂಗೇಶ್ವರ ದೇವಳದ ಮೂರು ಗೋವುಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಮಂಗಳೂರಿನ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಂಜೇಶ್ವರ ಮಚ್ಚಂಪಾಡಿ ನಿವಾಸಿ ಅಬ್ದುಲ್ಲ ಹುಸೈನ್ ಎಂದು ಗುರುತ್ತಿಸಲಾಗಿದೆ.
ಈತ ಇತ್ತೀಚೆಗೆ ಕೊಣಾಜೆ ಕೈರಂಗಳ ಪುಣ್ಯಕೋಟಿ ಅಮೃತಧಾರಾ ಗೋಶಾಲೆಯ ದನ ಕಳವು ಪ್ರಕರಣದಲ್ಲೂ ಪ್ರಮುಖ ಆರೋಪಿಯಾಗಿದ್ದಾನೆ. ಮಂಗಳೂರು ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನದ ದನ ಕಳ್ಳತನದಲ್ಲೂ ಈತನೇ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಹೇಳಲಾಗಿದೆ.

ಮಾರುತಿ ರಿಟ್ಜ್ ಕಾರಿನಲ್ಲಿ ದೇವಸ್ಥಾನದ ಎರಡು ದನ ಕಳ್ಳತನ ಮಾಡಿದ್ದಾಗಿ ಆರೋಪಿ ಒಪ್ಪಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. ಈತನ ನೇತ್ರತ್ವದ ತಂಡ ಮಂಗಳೂರು ಹಾಗೂ ನೆರೆಯ ಕಾಸರಗೋಡು ಪ್ರದೇಶಗಳಲ್ಲಿ ಅನೇಕ ದನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಹುಸೈನ್ ವಿರುದ್ಧ ಕಾಸರಗೋಡು ಮತ್ತು ಮಂಗಳೂರಿನಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.