LATEST NEWS
ಗೋಮಾಂಸ ಸಾಗಾಟ ಕೇಸಿನಲ್ಲಿ ಮಾಜಿ ಬಜರಂಗಿ ಅರೆಸ್ಟ್
ಕಾರ್ಕಳ ಡಿಸೆಂಬರ್ 14: ಅಕ್ರಮವಾಗಿ ದನಗಳನ್ನು ಕದ್ದು ಅದರ ಮಾಂಸ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ ಠಾಣಾ ಪೊಲೀಸರು ಮಾಜಿ ಬಜರಂಗದಳದ ಮುಖಂಡರೊಬ್ಬರನ್ನು ಬಂಧಿಸಿದ್ದಾರೆ. ಬಂಧಿತನನ್ನು ಬಜರಂಗದಳ ಕಾರ್ಕಳ ನಗರ ಘಟಕದ ಮಾಜಿ ಸಂಚಾಲಕ ಅನಿಲ್ ಪ್ರಭು ಎಂದು ಗುರುತಿಸಲಾಗಿದೆ.
ಈತ ಕಸಾಯಿಖಾನೆ ನಡೆಸುತ್ತಿದ್ದ ಮಹಮ್ಮದ್ ಯಾಸೀನ್ ಎಂಬಾತನಿಗೆ ದನ ಕಳ್ಳತನ ಸಂದರ್ಭದಲ್ಲಿ ಸಹಕರಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಕಳೆದ ನವೆಂಬರ್ ತಿಂಗಳಲ್ಲಿ ಬೈಕ್ ನಲ್ಲಿ ದನದ ಮಾಂಸ ಸಾಗಾಟ ನಡೆಸುತ್ತಿದ್ದ ಸಂದರ್ಭ ಪೊಲೀಸರು ಯಾಸೀನ್ ನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಯಾಸೀನ್ ಅನಿಲ್ ಪ್ರಭು ಅವರ ಹೆಸರನ್ನು ಹೇಳಿದ್ದ. ರಸ್ತೆ ಬದಿಯ ಬಿಡಾಡಿ ದನಗಳನ್ನು ಕದ್ದು ಸಾಗಿಸಲು ಅನಿಲ್ ಪ್ರಭು ಸಹಕರಿಸುತ್ತಿದ್ದ ಅಲ್ಲದೆ ಕಸಾಯಿಖಾನೆಗಳಿಗೆ ರಕ್ಷಣೆ ನೀಡಿ ಬಂದ ದುಡ್ಡಿನಲ್ಲಿ ಪಾಲು ಪಡೆಯುತ್ತಿದ್ದ ಎಂದು ಯಾಸೀನ್ ಪೊಲೀಸರ ಮುಂದೆ ತಿಳಿಸಿದ್ದಾನೆ. ಈ ಹಿನ್ನಲೆ ಕಾರ್ಕಳದ ತೆಳ್ಳಾರಿನಲ್ಲಿ ಅನಿಲ್ ಪ್ರಭು ನ್ನು ಪೊಲೀಸರು ಬಂಧಿಸಿದ್ದಾರೆ.
ಈ ನಡುವೆ ಅನಿಲ್ ಪ್ರಭು ಬಂಧನವಾಗುತ್ತಿದ್ದಂತೆ ಬಜರಂಗದಳದ ಮುಖಂಡರು ಅನಿಲ್ ಪ್ರಭು ವಿಗೂ ನಮ್ಮ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
Facebook Comments
You may like
-
ಕಟ್ಟಿಗೆಯಲ್ಲಿ ಹಲ್ಲೆ ಮಾಡಿ ತಂದೆಯನ್ನೇ ಕೊಲೆ ಮಾಡಿದ ಮಗ
-
ಅನುಮತಿ ಇಲ್ಲದೆ ಡ್ರೋನ್ ಬಳಸಿದರೆ ಕಠಿಣ ಕ್ರಮ – ಪೊಲೀಸ್ ಆಯುಕ್ತರ ಎಚ್ಚರಿಕೆ
-
ಸಹಾಯದ ನೆಪದಲ್ಲಿ ಮದ್ಯವಯಸ್ಸಿನ ಮಹಿಳೆ ಹಾಗೂ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನ..ಎಸ್ ಡಿಪಿಐ ಮುಖಂಡನ ಮೇಲೆ ಪೋಕ್ಸೋ ಪ್ರಕರಣ ದಾಖಲು
-
ಪುತ್ತೂರು ಅಕ್ರಮ ಗಾಂಜಾ ಸಾಗಾಟಕ್ಕೆ ಯತ್ನ – 40 ಸಾವಿರ ಮೌಲ್ಯದ ಗಾಂಜಾ ವಶಕ್ಕೆ ಪಡೆದ ಪೊಲೀಸರು
-
ಕುಂಬಳೆ ಮೂಲದ ಯುವಕನಿಗೆ ಹನಿಟ್ರ್ಯಾಪ್ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಪೊಲೀಸ್ ವಶಕ್ಕೆ
-
13 ವರ್ಷ ಬಾಲಕಿ ಮೇಲೆ 48 ಗಂಟೆಗಳಲ್ಲಿ 9 ಕಾಮುಕರಿಂದ 13 ಬಾರಿ ರೇಪ್
You must be logged in to post a comment Login