Connect with us

    DAKSHINA KANNADA

    ಸೈಕಲ್ ಹೇಳಿ ಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ

    ಸುಳ್ಯ ಡಿಸೆಂಬರ್ 14: ಸೈಕಲ್ ಹೇಳಿ ಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಪರಿಚಯಸ್ತ ಯುವಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ.


    ಆರೋಪಿಯನ್ನು ಸುಳ್ಯ ದೇವಚಳ್ಳ ಗ್ರಾಮದ ನಿವಾಸಿ ಅನಿಲ್ ಎಂದು ಗುರುತಿಸಲಾಗಿದ್ದು, ಇತ ಖಾಸಗಿ ಶಾಲೆಯ ಉದ್ಯೋಗಿಯಾಗಿದ್ದು, ಆರೋಪಿ ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿಯ ತಂದೆಗೆ ಪರಿಚಯಸ್ತನಾಗಿದ್ದಾನೆ.  ಡಿಸೆಂಬರ್ 10 ರಂದು ಮಧ್ಯಾಹ್ನ ಬಾಲಕಿಗೆ ಸೈಕಲ್ ಕಲಿಸುವುದಾಗಿ ಹೇಳಿ ಶಾಲೆಗೆ ಕರೆದುಕೊಂಡು ಹೋಗಿ ಅಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಅತ್ಯಾಚಾರದಿಂದ ದೈಹಿಕವಾಗಿ ಬಳಲಿದ್ದ ಬಾಲಕಿಯನ್ನು ಮನೆಯಲ್ಲಿ ತಾಯಿ ವಿಚಾರಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

    ಈ ಘಟನೆ ಕುರಿತಂತೆ ಬಾಲಕಿಯ ತಾಯಿ ನೀಡಿದ ದೂರಿನಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕಲo: 376 IPC ಮತ್ತು 5(F)(M),6,10 POCSO Act 2012 ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply