Connect with us

LATEST NEWS

ತಮಿಳುನಾಡು – ಬಾಲಕಿ ಮೇಲೆ ದಾಳಿ ಮಾಡಿದ ಹಸು…!! ವಿಡಿಯೋ ವೈರಲ್

Share Information

ತಮಿಳುನಾಡು ಅಗಸ್ಟ್ 11: ಶಾಲೆಯಿಂದ ಬರುತ್ತಿದ್ದ ಬಾಲಕಿಯೊಬ್ಬಳ ಮೇಲೆ ದನವೊಂದು ದಾಳಿ ಮಾಡಿದ ಘಟನೆ ಚೆನ್ನೈನ ಎಂಎಂಡಿಎ ಕಾಲೋನಿಯಲ್ಲಿ ನಡೆದಿದೆ.


ಬಾಲಕಿ ತಾಯಿ ಹಾಗೂ ತನ್ನ 5 ವರ್ಷದ ಸಹೋದರನೊಂದಿಗೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಘಟನೆ ನಡೆದಿದೆ. ತಾಯಿ ಹಾಗೂ ಇಬ್ಬರು ಮಕ್ಕಳು ನಡೆದುಕೊಂಡು ಹೋಗುತ್ತಿರುವಾಗ ಎರಡು ಹಸುಗಳು ಬಂದಿವೆ, ಅದರಲ್ಲಿ ಒಂದು ಹಸು ಬಾಲಕಿ ಮೇಲೆ ಕೋಡಗಿನಿಂದ ತಿವಿದು, ಕಾಲಿನಿಂದ ಮೆಟ್ಟಿ ದಾಳಿ ನಡೆಸಿ ಅರೆ ಜೀವ ಮಾಡಿದೆ.


ಆಕೆಯ ತಾಯಿ ಮಗಳ ಸಹಾಯಕ್ಕೆಂದು ಮುಂದಾದರೂ ಆ ಹಸು ತಾಯಿಯನ್ನು ಗದರಿಸಿ ಬಾಲಕಿ ಮೇಲೆ ದಾಳಿ ಮಾಡಿದೆ. ಕೊನೆಗೆ ಅಲ್ಲಿದ್ದವರು ಕಲ್ಲು, ಇಟ್ಟಿಗೆಗಳನ್ನು ಹಸುವಿನ ಮೇಲೆಸದರೂ ಯಾವುದೇ ಪ್ರಯೋಜನವಾಗಲಿಲ್ಲ, ಮಧ್ಯದಲ್ಲಿ ಅಲ್ಲಿದ್ದ ವ್ಯಕ್ತಿಯೊಬ್ಬ ಕಲ್ಲೆಸೆದು ಬಾಲಕಿಯನ್ನು ರಕ್ಷಿಸಬೇಕು ಎಂದುಕೊಂಡು ಬಾಲಕಿಯನ್ನು ಎಳೆದುಕೊಳ್ಳುವಷ್ಟರಲ್ಲಿ ಮತ್ತೆ ದಾಳಿ ನಡೆಸಿದೆ.
ತಕ್ಷಣವೇ ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಾಯಗೊಂಡ ಬಾಲಕಿಯನ್ನು ಆಯೆಷಾ ಎಂದು ಹೇಳಲಾಗುತ್ತಿದೆ, ಈ ಘಟನೆ ಆಗಸ್ಟ್ 9ಕ್ಕೆ ನಡೆದಿದ್ದು, ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.


Share Information
Advertisement
Click to comment

You must be logged in to post a comment Login

Leave a Reply