LATEST NEWS
ಉಡುಪಿಗೆ ಮಾರಕವಾಗುತ್ತಿದೆಯಾ ವೆನ್ ಲಾಕ್ ನ ಕೋವಿಡ್ ಲ್ಯಾಬ್ ವರದಿ….?
ಉಡುಪಿಗೆ ಮಾರಕವಾಗುತ್ತಿದೆಯಾ ವೆನ್ ಲಾಕ್ ನ ಕೋವಿಡ್ ಲ್ಯಾಬ್ ವರದಿ….?
ಉಡುಪಿ ಮೇ.29: ಕೊರೊನಾ ವೈರಸ್ ಪರೀಕ್ಷೆ ನಡೆಸುವ ಮಂಗಳೂರಿನ ವೆನ್ಲಾಕ್ ಲ್ಯಾಬ್ ಎಡವಟ್ಟಿಗೆ ಉಡುಪಿ ಜಿಲ್ಲೆಯ ಜನರು ಹೈರಾಣಾಗಿ ಹೋಗಿದ್ದಾರೆ. ಸ್ವತಃ ಜಿಲ್ಲಾಡಳಿತವೇ ಈ ಬಾರಿ ತಲೆ ಚಚ್ಚಿಕೊಳ್ಳುವ ಸರದಿ ಬಂದಿದೆ.
ಯಾವುದೇ ಕೊರೊನಾ ಸೊಂಕಿತರ ಸಂಪರ್ಕವಿಲ್ಲದ ಉಡುಪಿ ಜಿಲ್ಲಾ ಪಂಚಾಯತ್ ಹೊರಗುತ್ತಿದೆ ಸಿಬ್ಬಂದಿಗೆ ಕೊರೊನಾ ಸೊಂಕು ಇದೆ ಎಂದು ಲ್ಯಾಬ್ ಮೊದಲ ವರದಿಯಲ್ಲಿ ನೀಡಿತ್ತು. ಇದರಿಂದಾಗಿ ಇಡೀ ಜಿಲ್ಲಾಪಂಚಾಯತ್ ನ್ನು ಸ್ಯಾನಿಟೈಜ್ ಮಾಡಿ ಎಲ್ಲಾ ಸಿಬ್ಬಂದಿಗಳಿಗೆ ರಜೆ ನೀಡಿ ಸ್ವತಃ ಜಿಲ್ಲಾಪಂಚಾಯತ್ ಸಿಇಓ ಕೂಡ ತಮ್ಮ ಕೆಲಸಗಳಿಗೆ ವಿರಾಮ ನೀಡಿದ್ದರು.
ಅಲ್ಲದೆ ಸೊಂಕಿತ ನೌಕರನನ್ನು ಐಸೋಲೇಷನ್ ನಲ್ಲಿಟ್ಟು ಪರೀಕ್ಷೆ ನಡೆಸಲಾಗಿತ್ತು, ಈಗ ಎರಡು ಮತ್ತು ಮೂರನೇ ವರದಿ ಬಂದಿದ್ದು ಅದರಲ್ಲಿ ಕೊರೊನಾ ನೆಗೆಟಿವ್ ಬಂದಿದೆ. ಇದರಿಂದಾಗಿ ಉಡುಪಿ ಜಿಲ್ಲಾ ಪಂಚಾಯತ್ ಗಿದ್ದ ಆತಂಕ ದೂರಾಗಿದೆ.
ಉಡುಪಿಯಲ್ಲಿ ಈ ಹಿಂದೆಯೂ ಎರಡು ಪ್ರಕರಣ ದಲ್ಲಿ ಎಡವಟ್ಟಾಗಿತ್ತು, ಕ್ಯಾನ್ಸರ್ ಪೀಡಿತ ಚಿತ್ರದುರ್ಗ ಯುವತಿ ಗೂ ಮೊದಲು ಕೊರೊನಾ ಪಾಸಿಟಿವ್ ಎಂದು ವರದಿ ಬಂದಿತ್ತು, ಆದರೆ ನಂತರದ ಪರೀಕ್ಷೆಗಳಲ್ಲಿ ನೆಗೆಟಿವ್ ಅನ್ನೋದು ಖಚಿತವಾಗಿತ್ತು. ಅಲ್ಲದೆ ಕಾರ್ಕಳದ ತಂಬು ಗರ್ಭಿಣಿ ಮಹಿಳೆಯೂ ಪಾಸಿಟಿವ್ ನಿಂದ ನೆಗೆಟಿವ್ ಆಗಿದ್ರು. ಕೊರೊನಾ ತಲೆ ನೋವು ನಡುವೆ ಕೊರೊನಾ ಪರೀಕ್ಷೆ ಲ್ಯಾಬ್ ಗಳ ಎಡವಟ್ಟು ಜಿಲ್ಲೆಯ ಜನರ ನಿದ್ದೆಗಡಿಸಿದೆ.