Connect with us

    LATEST NEWS

    ಕರಾವಳಿಗೆ ಮಹಾರಾಷ್ಟ್ರ ಕಂಟಕ… ಟೆಸ್ಟಿಂಗ್ ಆಗದೇ ಉಳಿದಿದೆ 6700 ಕೇಸು

    ಕರಾವಳಿಗೆ ಮಹಾರಾಷ್ಟ್ರ ಕಂಟಕ ಟೆಸ್ಟಿಂಗ್ ಆಗದೇ ಉಳಿದಿದೆ 6700 ಕೇಸು

    ಮಂಗಳೂರು, ಮೇ 29: ಮಹಾರಾಷ್ಟ್ರದಿಂದ ನಿರ್ಗಮಿತ ಜನರು ಉಡುಪಿ ಜಿಲ್ಲೆಗೆ ಕಂಟಕವಾಗಿರುವಾಗಲೇ ಅಲ್ಲಿನ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿರುವುದು ಟೆಸ್ಟಿಂಗ್ ರಿಪೋರ್ಟ್. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಟೆಸ್ಟಿಂಗ್ ಲ್ಯಾಬ್ ಇರುವುದು ಮಂಗಳೂರಿನಲ್ಲಿ ಮಾತ್ರ. ಹೀಗಾಗಿ ಕರಾವಳಿ ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಕೊರೊನಾ ಟೆಸ್ಟಿಂಗ್ ದೊಡ್ಡ ಸವಾಲಾಗಿ ಪರಿಣಮಿಸಿದೆ.

    ಉಡುಪಿ ಜಿಲ್ಲೆ ಒಂದರದ್ದೇ ಮೇ 29ರ ಸಂಜೆ ವರೆಗಿನ ಮಾಹಿತಿ ಪ್ರಕಾರ, 6019 ಮಂದಿಯ ಟೆಸ್ಟಿಂಗ್ ಬಾಕಿ ಇದೆ ಅನ್ನುವ ಮಾಹಿತಿ ಆರೋಗ್ಯ ಇಲಾಖೆಯಿಂದ ಸಿಕ್ಕಿದೆ. ಇದೇ ವೇಳೆ, ದಕ್ಷಿಣ ಕನ್ನಡ ಜಿಲ್ಲೆಯಿಂದ 593 ರಿಪೋರ್ಟ್ ಬಾಕಿಯಿದೆ. ಆದರೆ, ವೆನ್ಲಾಕ್ ಲ್ಯಾಬ್ ನಲ್ಲಿ ದಿನವೊಂದರಲ್ಲಿ 200ರಿಂದ 250 ಮಂದಿಯ ರಿಪೋರ್ಟ್ ಅಷ್ಟೇ ಹೊರಬರುತ್ತಿರುವುದು. ಇದರಿಂದಾಗಿ ದಿನಂಪ್ರತಿ ಎರಡು ಜಿಲ್ಲೆಗಳಿಂದ 500 ರಷ್ಟು ಹೊಸ ಸ್ಯಾಂಪಲ್ ಬಂದರೂ, ಬರ್ಡನ್ ಮತ್ತಷ್ಟು ಹೆಚ್ಚಲಿದೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಂದ ಬರುವ ಸಾರಿ ರಿಪೋರ್ಟ್ ಗಳೂ ಪರೀಕ್ಷೆಗೆ ಒಳಪಡದೆ ತಲೆನೋವಿಗೆ ಕಾರಣವಾಗಿದೆ.

    ಮೇ 28ರಂದು ಪಾಸಿಟಿವ್ ಆಗಿದ್ದ ಮಂಗಳೂರು ತಾಲೂಕಿನ ಗುರುಪುರದ ಮೂಳೂರಿನ ವ್ಯಕ್ತಿಯೊಬ್ಬರ ಗಂಟಲ ದ್ರವ ಎರಡು ವಾರದ ಹಿಂದೆಯೇ ಸಂಗ್ರಹಿಸಲಾಗಿತ್ತು. ಮನೆಗೆ ಬಂದು ಸಂಗ್ರಹಿಸಿದ್ದ ಪರೀಕ್ಷೆ ವರದಿ ಬರುವುದು ತಡವಾಗಿದ್ದರಿಂದ 23 ವರ್ಷದ ಆ ವ್ಯಕ್ತಿ ಊರಿಡೀ ತಿರುಗಾಡಿದ್ದಾನೆ. ಸೆಲೂನ್, ಮಾರುಕಟ್ಟೆ ಹೀಗೆ ಸುತ್ತಾಡಿದ್ದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮುಂಬೈನಿಂದ ಬಂದಿದ್ದ ವ್ಯಕ್ತಿ ಆಗಿದ್ದರೂ, ಜಿಲ್ಲಾಡಳಿತ ಆತನಿಗೆ ಹೋಮ್ ಕ್ವಾರಂಟೈನ್ ಇರಲು ಅವಕಾಶ ಕೊಟ್ಟಿದ್ದು ಈಗ ಕೊರೊನಾ ಪ್ರಸಾದ ಊರಿನಲ್ಲೂ ಹಂಚುವಂತಾಗಿದೆ.

    ಸಕಾಲದಲ್ಲಿ ಟೆಸ್ಟಿಂಗ್ ರಿಪೋರ್ಟ್ ಬರದಿರುವುದು ಒಂದೆಡೆ ಆರೋಗ್ಯ ಸಮಸ್ಯೆ ಬಿಗಡಾಯಿಸಿದರೆ, ಇನ್ನೊಂದೆಡೆ ಹೋಮ್ ಕ್ವಾರಂಟೈನಲ್ಲಿ ಇರುವ ವ್ಯಕ್ತಿಗಳಿಂದ ಸೋಂಕು ಮತ್ತಷ್ಟು ಮಂದಿಗೆ ಹರಡಲು ಕಾರಣವಾಗುತ್ತಿದೆ. ಪ್ರತಿ ಜಿಲ್ಲೆಯಲ್ಲೂ ಕೊರೊನಾ ಟೆಸ್ಟಿಂಗ್ ಸೆಂಟರ್ ಮಾಡಲು ಆದೇಶ ಆಗಿದ್ದರೂ, ಇನ್ನೂ ಕಾರ್ಯಗತ ಆಗದಿರುವುದು ಕೊರೊನಾ ನಿಭಾವಣೆ ಕಷ್ಟವಾಗಲಿದೆ. ಉಡುಪಿ ಜಿಲ್ಲೆಯಲ್ಲಿ ಮಣಿಪಾಲದಲ್ಲಿ ವಾರದ ಹಿಂದೆ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಆರಂಭಗೊಂಡಿದ್ದರೂ, ಅಲ್ಲಿ ಇನ್ನೂ ಪೂರ್ಣ ಮಟ್ಟದಲ್ಲಿ ಟೆಸ್ಟಿಂಗ್ ಆಗುತ್ತಿಲ್ಲ. ಹೆಬ್ರಿ, ಕಾರ್ಕಳ, ವೇಣೂರು ಭಾಗದಲ್ಲಿ ಕೊರೊನಾ ಹರಡಲು ಟೆಸ್ಟಿಂಗ್ ರಿಪೋರ್ಟ್ ವಿಳಂಬ ಆಗುತ್ತಿರುವುದೂ ಒಂದು ಕಾರಣ ಎನ್ನಲಾಗುತ್ತಿದೆ.

    ಮೇ 10ರಿಂದ 20ರ ನಡುವೆ ಮಹಾರಾಷ್ಟ್ರದಿಂದ ಉಡುಪಿಗೆ ಹತ್ತು ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಹೀಗಾಗಿ ಅಲ್ಲಿನ ಏಳೆಂಟು ಸಾವಿರದಷ್ಟು ಕೇಸು ಕಳೆದ ಹತ್ತು ದಿನಗಳಿಂದ ಮಂಗಳೂರಿನಲ್ಲಿ ಪರೀಕ್ಷೆಗೆ ಒಳಪಡದೆ ಉಳಿದಿದ್ದು ಕೊರೊನಾ ಪೀಡಿತರನ್ನು ಹೈರಾಣು ಮಾಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply