LATEST NEWS
ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಕಾರ್ಕಳದ ಹುಡುಗಿಯ ಕವರ್ ಡ್ರೈವ್….!!

ಗ್ರಾಮೀಣ ಪ್ರತಿಭೆ ಗುರುತಿಸುವ ಕೆಲಸ ಆಗಬೇಕಿದೆ
ಉಡುಪಿ ಜೂನ್ 13: ಕಾರ್ಕಳದ ಹುಡುಗಿಯೊಬ್ಬಳು ಈಗ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ನಲ್ಲಿದ್ದಾಳ. ಈಕೆಯ ಒಂದೇ ಒಂದು ಕವರ್ ಡ್ರೈವ್ ಸ್ಪೆಷಲಿಸ್ಟ್ ಈಗ ಈಕೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಫೇಮಸ್ ಮಾಡಿದೆ. .ಯಾರಿಕೇ ನೋಡೋಣ ಬನ್ನಿ….
ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿರುವ ಈ ವಿಡಿಯೋ ಇರೊದು ಕೇವಲ ಆರೇ ಆರು ಸೆಂಕಡ್. ಈ ವಿಡಿಯೋ ಎಲ್ಲಿವರೆಗೆ ವೈರಲ್ ಆಗಿದೆ ಅಂದ್ರೆ ಅಂತರಾಷ್ಟ್ರೀಯ ಮಾಧ್ಯಮ ESPN ಈ ವಿಡಿಯೋವನ್ನು ಪೋಸ್ಟ್ ಮಾಡಿ ಹಾಡಿ ಹೊಗಳಿದೆ..ಇಂಥದೊಂದು ಹೊಡೆತವನ್ನು ನೀವು ಎಂದಾದ್ರೂ ನೋಡಿದ್ದಿರಾ ಅಂತಾ ಬಣ್ಣಿಸಿದೆ. ಲೆಗ್ ಸ್ಪಂಪ್ನಿಂದ ಆಚೆ ಹೋಗಿ ಒಂದು ಸ್ಪೆಪ್ ಮುಂದೆ ಬಂದು ಚೆಂಡಿನ ಮೇಲೆ ಹದ್ದಿನ ಕಣ್ಣಿನ ಗುರಿಯಿಟ್ಟ ಹುಡುಗಿಯೊಬ್ಬಳು ಹೊಡೆದ ಕವರ್ ಡ್ರೈವ್ ನೋಡಿ ಕ್ರಿಕೆಟ್ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.

ಈ ಹುಡಗಿ ಹೊಡೆದ ಈ ಕವರ್ ಡ್ರೈವ್ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟಿಗರನ್ನೇ ನಾಚಿಸುವಂತಿದೆ. ಇದೇ ಹೊಡೆತ ಒಂದು ವೇಳೆ ಗೌಂಡ್ನಲ್ಲಿ ಹೊಡೆದಿದ್ರೆ..ಚೆಂಡು ಬುಲೆಟ್ ವೇಗದಲ್ಲಿ ನುಗ್ಗಿ ಬೌಂಡರಿ ಗೆರೆಯಲ್ಲಿ ಹಾಕುವ ಜಾಹೀರಾತು ಫಲಕದ ಮೇಲೆ ಸಿಡಿಲಿನಂತೆ ಬಂದಪ್ಪಳಿಸುತ್ತಿತ್ತೋ ಏನೋ..! ವಿರಾಟ್ ಕೊಹ್ಲಿ, ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಇಂಥದೊಂದು ಕವರ್ ಡ್ರೈವ್ ಹೊಡೆದಿರೋದನ್ನು ನೀವೆಲ್ಲಾ ನೋಡಿರಬಹುದು..ಸೇಮ್ ಟು ಸೇಮ್ ಆದೇ ರೀತಿ ಈ ಹುಡುಗಿ ತನ್ನೆಲ್ಲಾ ಬಲವನ್ನು ಚೆಂಡಿಗೆ ರವಾನಿಸಿ ಬ್ಯಾಟ್ ಬೀಸಿದ್ದಾಳೆ. ಅಷ್ಟಕ್ಕೂ ಇಂಟೆರ್ನೆಟ್ನಲ್ಲಿ ಸೆನ್ಸೆಷನ್ ಸೃಷ್ಟಿಸಿರುವ ಈ ಹುಡುಗಿ ಯಾರು ಗೊತ್ತಾ..? ಈ ಕವರ್ ಡ್ರೈವ್ ಸ್ಪೆಷಲಿಸ್ಟ್ ಕಾರ್ಕಳದ ಕುವರಿ..ಕಾರ್ಕಳದ ತಾಲೂಕಿನ ಕೆರ್ವಾಶೆ ಗ್ರಾಮದವಳು.
ಈಕೆಯ ಹೆಸರು ಜ್ಯೋತಿ ಅಂತ..ಈಕೆ ಚಿಕ್ಕ ವಯಸ್ಸಿನಿಂದಲೇ ಈಕೆ ಇದೇ ಬ್ಯಾಟ್ ಬೀಸುತ್ತಿದ್ಳು. ಶಾಲಾ ದಿನಗಳಲ್ಲೂ ಕೂಡ ಹುಡುಗರು ಆಡೋ ಮೈದಾನದಲ್ಲಿ ಚೆಂಡನ್ನು ಲೀಲಾಜಾಲವಾಗಿ ಬೌಂಡರಿ ಗೆರೆ ದಾಟಿಸುತ್ತಿದ್ದಳು..ಆದರೆ ಈ ಗ್ರಾಮೀಣ ಮಟ್ಟದ ಈ ಪ್ರತಿಭೆ ಕೇವಲ ಪ್ರತಿಭೆಯಾಗಿಯೇ ಉಳಿದಿದೆ..ಒಂದು ವೇಳೆ ಸೂಕ್ತ ತರಬೇತಿ ಸಿಕ್ಕಿದಿದ್ರೆ ಈಕೆ ಖಂಡಿತವಾಗಿಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪರವಾಗಿ ಆಟ ಆಡುತ್ತಿದ್ದಳು..ಇನ್ನು ಕಾಲ ಮಿಂಚಿಲ್ಲ ಈ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕಿದೆ..