LATEST NEWS
ಶುಲ್ಕ ಪಾವತಿಗೆ ಒತ್ತಡ ಹೇರಿದಲ್ಲಿ ನಿರ್ದಾಕ್ಷಿಣ್ಯ ಕ್ರಮ
ಶುಲ್ಕ ಪಾವತಿಗೆ ಒತ್ತಡ ಹೇರಿದಲ್ಲಿ ನಿರ್ದಾಕ್ಷಿಣ್ಯ ಕ್ರಮ
ಮಂಗಳೂರು, ಜೂನ್ 12 : ಖಾಸಗಿ ಶಾಲೆಗಳು ಶುಲ್ಕ ಪಾವತಿಗೆ ಯಾವುದೇ ರೀತಿಯ ಒತ್ತಡ ಹಾಕಿದಲ್ಲಿ ಅಂಥ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುತ್ತೋಲೆ ಹೊರಡಿಸಿದ್ದಾರೆ.
ಶಾಲಾ ಶುಲ್ಕ ಪಾವತಿ ವಿಚಾರದಲ್ಲಿ ದ.ಕ ಜಿಲ್ಲಾಧಿಕಾರಿಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಆಯಾ ತಾಲೂಕು ಶಿಕ್ಷಣಾಧಿಕಾರಿ ಮೂಲಕ ಈ ರೀತಿಯ ಆದೇಶ ಹೊರಡಿಸಲಾಗಿದೆ. ಲಾಕ್ ಡೌನ್ ಕಾರಣ ಈ ಬಾರಿ ಪೋಷಕರು ಶುಲ್ಕ ಪಾವತಿಸಲು ಕಷ್ಟವಾಗುತ್ತದೆ ಅಂದರೆ, ಶಾಲಾಡಳಿತಗಳು ಒತ್ತಡ ಹೇರುವಂತಿಲ್ಲ. ಶುಲ್ಕ ಪಾವತಿಸದ ಕಾರಣಕ್ಕೆ ವಿದ್ಯಾರ್ಥಿಗಳನ್ನು ಹೊರಹಾಕಿದ ಬಗ್ಗೆ ದೂರು ಲಭಿಸಿದಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.