LATEST NEWS
ವಕೀಲರ ಅವಹೇಳನ ಆರೋಪ ಗಿರಿಗಿಟ್ ತುಳು ಸಿನೆಮಾ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದ ಕೋರ್ಟ್

ವಕೀಲರ ಅವಹೇಳನ ಆರೋಪ ಗಿರಿಗಿಟ್ ತುಳು ಸಿನೆಮಾ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದ ಕೋರ್ಟ್
ಮಂಗಳೂರು ಸೆಪ್ಟೆಂಬರ್ 12: ಯಶಸ್ವೀ ಪ್ರದರ್ಶನ ನೀಡುತ್ತಿರುವ ತುಳು ಚಲನಚಿತ್ರ ಗಿರಿಗಿಟ್ ಚಿತ್ರದಲ್ಲಿ ವಕೀಲರ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎನ್ನುವ ಕಾರಣಕ್ಕಾಗಿ ಮಂಗಳೂರು ವಕೀಲರ ಸಂಘ ಚಿತ್ರ ಪ್ರದರ್ಶನಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದೆ.
ದಕ್ಷಿಣಕನ್ನಡ ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಲಯ ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದೆ. ಚಿತ್ರದಲ್ಲಿ ವಕೀಲನ ಪಾತ್ರ ಮಾಡಿರುವಂತಹ ಹಾಸ್ಯ ನಟ ವಕೀಲ ವೃತ್ತಿಯನ್ನು ಅವಹೇಳನ ಮಾಡಿದ್ದಾರೆ ಎಂದು ಮಂಗಳೂರು ವಕೀಲರ ಸಂಘ ಚಿತ್ರ ಬಿಡುಗಡೆಯಾಗಿ ಎರಡು ವಾರದ ಬಳಿಕ ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ.

ಚಿತ್ರದಲ್ಲಿ ವಕೀಲ ಪಾತ್ರ ನಿರ್ವಹಿಸಿರುವ ಕಲಾವಿದ ಐಪಿಸಿ ಸೆಕ್ಷನ್ ಗೆ ಐಪಿಲ್, ಐಪಿಎಸ್, ಐಎಎಸ್ ಹೀಗೆ ಅವಹೇಳನ ರೀತಿಯಲ್ಲಿ ವಕೀಲರನ್ನು ಬಿಂಬಿಸಿದ್ದಾರೆನ್ನುವ ಆರೋಪ ವಕೀಲರ ಸಂಘದ್ದಾಗಿದೆ.