ನೇತ್ರಾವತಿ ನದಿಯಲ್ಲಿ ಕೊಚ್ಚಿಹೋಗುತ್ತಿದ್ದ ವೃದ್ದೆಯನ್ನು ರಕ್ಷಿಸಿದ ದೋಣಿ ನಾವಿಕ

ಬಂಟ್ವಾಳ ಸೆಪ್ಟೆಂಬರ್ 12: ನೇತ್ರಾವತಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧೆಯೊಬ್ಬರನ್ನು ಸ್ಥಳೀಯ ದೋಣಿ ನಾವಿಕರೊಬ್ಬರು ರಕ್ಷಣೆ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಎಂಬಲ್ಲಿ ನಡೆದಿದೆ.

ಸಮಾರು 70 ವರ್ಷ ಪ್ರಾಯದ ಕಡಬ ತಾಲೂಕಿನ ರಾಮಕುಂಜ ನಿವಾಸಿ ಮಂಜಕ್ಕ ಎಂಬುವವರನ್ನು ಕಡೇಶಿವಾಲಯದ ನಿವಾಸಿ, ದೋಣಿ ನಾವಿಕ ಅಬ್ಬಾಸ್ ಎಂಬವರು ಮಾಡಿದ್ದಾರೆ.

ಇಂದು ಬೆಳಿಗ್ಗೆ ಸಂದರ್ಭ ಕಡೇ ಶಿವಾಲಯದ ಸಮೀಪದ ನೇತ್ರಾವತಿ ನದಿಯಲ್ಲಿ ಈ ಘಟನೆ ನಡೆದಿದೆ.

ವೃದ್ದೆ ಮಂಜಕ್ಕ ನೀರಿನ ಸೆಳೆತಕ್ಕೆ ಕೊಚ್ಚಿಹೋಗುತ್ತಿದ್ದನ್ನು ಅಲ್ಲೆ ನೇತ್ರಾವತಿ ನದಿ ತೀರದಲ್ಲಿದ್ದ ದೋಣಿ ನಾವಿಕ ಅಬ್ಬಾಸ್ ಅವರು ನೋಡಿ ನೀರಿನ ಸೆಳೆತಕ್ಕೆ ಹೋಗುತ್ತಿದ್ದ ಅವರನ್ನು ಕೇಶವ ಎಂಬವರ ಸಹಾಯದೊಂದಿಗೆ ಮೆಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ.

ನಂತರ ವೃದ್ದೆಯನ್ನು ವಿಚಾರಿಸಿದಾಗ ತಾನು ಉಪ್ಪಿನಂಗಡಿ ನಿವಾಸಿ ಮಂಜಕ್ಕ ಎಂದು ತಿಳಿಸಿದ್ದಾರೆ. ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಬಂದು ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ.

Facebook Comments

comments