ಕಂಡ್ಲೂರು ಬಳಿ ಬಿಸ್ಕತ್ ತುಂಬಿದ ಲಾರಿಗೆ ಬೆಂಕಿ

ಉಡುಪಿ ಸೆಪ್ಟೆಂಬರ್ 12: ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಬಳಿ ಬಿಸ್ಕತ್ ತುಂಬಿದ ಲಾರಿಯೊಂದಕ್ಕೆ ಬೆಂಕಿಗಾಹುತಿಯಾದ ಘಟನೆ ನಡೆದಿದೆ.

ಕುಂದಾಪುರ ದಿಂದ ಶಿವಮೊಗ್ಗ ದತ್ತ‌ ತೆರಳುತ್ತಿದ್ದ ಈ ಲಾರಿಯಲ್ಲಿ ಬಿಸ್ಕತ್ ಹಾಗೂ ರಸ್ಕ್ ತಿಂಡಿ ಪದಾರ್ಥಗಳು ಇದ್ದು, ಲಾರಿಯ ಹಿಂಭಾಗದ ಲೈಟ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಸಿಕೊಂಡಿದೆ.

ಬೆಂಕಿ ಲಾರಿಯಲ್ಲಿದ್ದ ಸುಮಾರು 3.5 ಲಕ್ಷ ರೂಪಾಯಿ ಮೌಲ್ಯದ ಬಿಸ್ಕತ್, ರಸ್ಕ್ ಸಂಪೂರ್ಣ ಸುಟ್ಟು ಹೋಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.

Facebook Comments

comments