LATEST NEWS
ಕರ್ಣಾಟಕ ಬ್ಯಾಂಕ್ ವಿರುದ್ದ ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ಖಾಸಗಿ ಚಾನೆಲ್ ಗೆ ತಡೆಯಾಜ್ಞೆ

ಮಂಗಳೂರು ಜುಲೈ 02: ದೇಶದ ಪ್ರಮುಖ ಖಾಸಗಿ ಬ್ಯಾಂಕ್ ಕರ್ಣಾಟಕ ಬ್ಯಾಂಕ್ ವಿರುದ್ದ ಮಾನಹಾನಿಕರ ಸುದ್ದಿಯನ್ನು ಪ್ರಸಾರ ಮಾಡದಂತೆ ಕನ್ನಡದ ಖಾಸಗಿ ಚಾನೆಲ್ ಗೆ ಕೋರ್ಟ್ ತಡೆಯಾಜ್ಞೆ ನೀಡಿದೆ.
ಕರ್ಣಾಟಕ ಬ್ಯಾಂಕ್ ವಿರುದ್ಧ ಖಾಸಗಿ ಚಾನೆಲ್ ಮಾನಹಾನಿಕರ ಸುದ್ದಿ/ಸಂದೇಶ ಪ್ರಸಾರ ಮಾಡದಂತೆ 29ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ತಾತ್ಕಾಲಿಕ ತಡೆಯಾಜ್ಞೆಯನ್ನು ನೀಡಿದ್ದಾರೆ. ಬ್ಯಾಂಕ್‌ನ ಗ್ರಾಹಕರಲ್ಲಿ, ಷೇರುದಾರರಲ್ಲಿ ಗೊಂದಲ ಮತ್ತು ಆತಂಕ ಉಂಟಾಗುವ, ಬ್ಯಾಂಕ್‌ನ ಗೌರವ ಮತ್ತು ಮಾನಕ್ಕೆ ಹಾನಿಯಾಗುವ ಯಾವುದೇ ಸುದ್ದಿಗಳನ್ನು ಮುಂದಿನ ವಿಚಾರಣೆಯವರೆಗೆ ಪ್ರಸಾರ ಮಾಡದಿರುವಂತೆ ಆದೇಶಿಸಲಾಗಿದೆ.

101 ವರ್ಷಗಳ ಬಲಿಷ್ಠ ಇತಿಹಾಸವಿರುವ ಕರ್ಣಾಟಕ ಬ್ಯಾಂಕ್ ಸುದೃಢವಾಗಿದ್ದು, ಠೇವಣಿದಾರರು, ಖಾತೆದಾರರು ಮತ್ತು ಷೇರುದಾರರು ಯಾವುದೇ ರೀತಿಯ ಆತಂಕ ಪಡಬೇಕಾಗಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
1 Comment