KARNATAKA
”ಹೆಂಡತಿ ಜತೆ ಮಲಗಿ’ ಎಂದು ಸಾವಿರಗಟ್ಟಲೇ ಹಣ ಪೀಕಿದ ಜೋಡಿಗಳು ಅರೆಸ್ಟ್

ಬೆಂಗಳೂರು, ಫೆಬ್ರವರಿ 26: ಗಂಡ -ಹೆಂಡತಿ ನೆಪದಲ್ಲಿ ಹೊಸದೊಂದು ಹೈಫೈ ದಂಧೆ ಸಿಲಿಕಾನ್ ಸಿಟಿಯಲ್ಲಿ ಪ್ರಾರಂಭವಾಗಿದೆ. ವೀಕ್ ಎಂಡ್ ಬಂದರೆ ಸಾಕು 50 ರಿಂದ 60ಕ್ಕೂ ಹೆಚ್ಚು ನಕಲಿ ಜೋಡಿಗಳು ದಂಧೆ ನಡೆಸಿ ಹಣ ಸಂಪಾದನೆ ಮಾಡಿದ್ದಾರೆ.ಸದ್ಯ ಇಂತಹ 5 ಜೋಡಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಗರಕ್ಕೆ ಬರುವ ನಕಲಿ ದಂಪತಿಗಳು ಟ್ವಿಟರ್, ಟೆಲಿಗ್ರಾಂ ಮೂಲಕ ಕೋಟ್ಯಾಧಿಪತಿಗಳಿಗೆ ಗಾಳ ಹಾಕುತ್ತಾರೆ. ನಾವು ಗಂಡ- ಹೆಂಡತಿ ಎಂದು ಪರಿಚಯ ಮಾಡಿಕೊಳ್ಳುತ್ತಾ ಬ್ಯುಸಿನೆಸ್ ತುಂಬಾ ಲಾಸ್ ಆಗಿದೆ. ಕೆಲ ಅನಿವಾರ್ಯ ಕಾರಣದಿಂದ ತಕ್ಷಣಕ್ಕೆ ದುಡ್ಡು ಬೇಕಿದೆ ಅಂತ ನಾಟಕವಾಡುತ್ತಾರೆ. ಒಮ್ಮೆ ಮಾತ್ರ ಪತ್ನಿ ಜತೆಯಿರಲು ಅವಕಾಶ ಕೊಡ್ತಿದ್ದೀನಿ ಎಂದು ಚಂದದ ಹುಡುಗಿಯ ಪೋಟೋ ಶೇರ್ ಮಾಡಿ, ಗಂಟೆಗೆ 40- 50 ಸಾವಿರ ಹಣಕ್ಕೆ ಡಿಮ್ಯಾಂಡ್ ಮಾಡುತ್ತಾರೆ. ಇದಕ್ಕೆ ಒಪ್ಪಿ ಅಡ್ವಾನ್ಸ್ ಹಣ ಹಾಕಿದ್ರೆ ಐಷಾರಾಮಿ ಹೋಟೆಲ್ಗಳಲ್ಲಿ ರೂಮ್ ಬುಕ್ ಮಾಡ್ತಾರೆ.

ಈ ಹಿನ್ನೆಲೆಯಲ್ಲಿ ಅಲರ್ಟ್ ಆಗಿದ್ದ ಸಿಸಿಬಿ ಪೊಲೀಸರು ಕಳೆದ 1 ತಿಂಗಳಿಂದ ಈ ಬಗ್ಗೆ ನಿಗಾವಹಿಸಿದ್ದರು. ಹೀಗಾಗಿ 5 ಜೋಡಿಗಳನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿ ತನಿಖೆ ಮಾಡುತ್ತಿದ್ದಾರೆ.