Connect with us

LATEST NEWS

ತಣ್ಣೀರು ಬಾವಿ ಕಡಲಕಿನಾರೆಯಲ್ಲಿ ಡಾಲ್ಫಿನ್ ಮೃತದೇಹ…!!

ಮಂಗಳೂರು ಫೆಬ್ರವರಿ 25: ತಣ್ಣೀರು ಬಾವಿ ಕಡಲಕಿನಾರೆಯಲ್ಲಿ ಡಾಲ್ಫಿನ್ ಮೀನಿನ ಮೃತದೇಹ ಪತ್ತೆಯಾದ ಘಟನೆ ಶುಕ್ರವಾರ ನಡೆದಿದೆ.

ಮಧ್ಯಾಹ್ನ ಎರಡು ಗಂಟೆಯ ವೇಳೆ ಅಲೆಗಳ ಜೊತೆಯಲ್ಲಿ ಮೀನಿನ ಮೃತದೇಹ ಫಾತಿಮಾ ಚರ್ಚ್‌ ಭಾಗದಲ್ಲಿ ದಡಕ್ಕೆ ಬಂದಿದೆ. ಈ ವೇಳೆ ಬ್ಲೂ ಫ್ಲ್ಯಾಗ್ ಯೋಜನೆ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರು ಸತ್ತ ಡಾಲ್ಫಿನ್ ಮೀನನ್ನು ಎಳೆದು ದಡಕ್ಕೆ ತಂದರು. ಬಳಿಕ ಪಣಂಬೂರು ಪೊಲೀಸರಿಗೂ ಕರಾವಳಿ ಕಾವಲು ಪಡೆಯವರಿಗೂ ಅರಣ್ಯ ಇಲಾಖೆಗೂ ಮಾಹಿತಿ ನೀಡಲಾಯಿತು.

 

ಅಧಿಕಾರಿಗಳು ಸ್ಥಳಕ್ಕೆ ಬಂದ ನಂತರ ಅರಣ್ಯ ಇಲಾಖೆಯ ಪರವಾಗಿ ರೀಫ್‌ ವಾಚ್‌ ಮರೈನ್ ಕನ್ಸರ್ವೇಷನ್‌ ಸಂಸ್ಥೆಯ ಕರ್ನಾಟಕ ಸಂಯೋಜಕಿ ತೇಜಸ್ವಿನಿ ಅವರು ಮೀನಿನ ಮರಣೋತ್ತರ ಪರೀಕ್ಷೆ ನಡೆಸಿದರು. ‘ಎಲ್ಲ ಪ್ರಕ್ರಿಯೆ ಮುಗಿದ ನಂತರ ಐದು ಅಡಿ ಆಳದ ಹೊಂಡ ತೋಡಿ ಮೀನನ್ನು ಅದರಲ್ಲಿ ಮುಚ್ಚಿಲಾಯಿತು.

 

Advertisement
Click to comment

You must be logged in to post a comment Login

Leave a Reply