Connect with us

BANTWAL

ಕೊರೊನಾ ಸೋಂಕು ದೃಢಪಟ್ಟರೂ ವಿವಾಹದಲ್ಲಿ ಭಾಗಿ – ಪ್ರಕರಣ ದಾಖಲು

ಬಂಟ್ವಾಳ, ಮೇ 14: ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದ್ದರೂ ವಿವಾಹ ಸಮಾರಂಭದಲ್ಲಿ ಭಾಗಿಯಾದ ಮಣಿನಾಲ್ಕೂರು ಗ್ರಾಮ ನಿವಾಸಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮಣಿನಾಲ್ಕೂರು ಗ್ರಾಮದ ಬೊಳ್ಳುಕಲ್ಲು ನಿವಾಸಿ ರಾಜೇಶ್ ಪೂಜಾರಿ ಅವರು ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪಿ. ರಾಜೇಶ್ ಪೂಜಾರಿಗೆ ಕೊರೊನಾ ಸೋಂಕು ತಗುಲಿರುವುದು ಮೇ 10ರಂದು ದೃಢಪಟ್ಟಿದ್ದು, ಆದರೆ ಅವರು ಗುರುವಾರ ಕಾರ್ಕಳದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು.

ಗ್ರಾ.ಪಂ.ಪಿಡಿಒ ಅವರ ತಂಡ ಮನೆಗೆ ಭೇಟಿಯಾದಾಗ ಕ್ವಾರಂಟೈನ್ ನಲ್ಲಿ ಇರಬೇಕಾದ ಅವರು ಮನೆಯಲ್ಲಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಿಡಿಒ ವಸಂತಿ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ