LATEST NEWS
ವರನಿಗೆ ಕೊರೊನಾ..ಪಿಪಿಇ ಕಿಟ್ ಧರಿಸಿ ಮದುವೆ ಶಾಸ್ತ್ರ
ಮಧ್ಯಪ್ರದೇಶ ಎಪ್ರಿಲ್ 27: ಕೊರೊನಾ ಎರಡನೇ ಅಲೆ ಹೊಡೆತಕ್ಕೆ ಇಡೀ ದೇಶವೇ ಕಂಗೆಟ್ಟಿದ್ದು, ಸಂಭ್ರಮದ ಕ್ಷಣಗಳನ್ನು ಆತಂಕದಲ್ಲಿ ಕಳೆಯುವಂತೆ ಮಾಡಿದೆ. ಈ ನಡುವೆ ಮಧ್ಯ ಪ್ರದೇಶದಲ್ಲಿ ವರನಿಗೆ ಕೊವಿಡ್ ಸೊಂಕು ತಗುಲಿದ್ದರೂ ಕೂಡ ಪಿಪಿಇ ಕಿಟ್ ಧರಿಸಿ ಮದುವೆ ಸಮಾರಂಭ ನಡೆದಿದೆ. ಈ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ರತ್ಲಮ್ನಲ್ಲಿ ಈ ವಿಶೇಷ ಮದುವೆ ನಡೆದಿದೆ, ವಿವಾಹ ಮಾಡಿಸುವ ಹಿರಿಯರು ಕೂಡ ಪಿಪಿಇ ಕಿಟ್ ಧರಿಸಿದ್ದರು. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮದುವೆ ನಡೆಯಲು ಇನ್ನು ಎರಡು ದಿನ ಬಾಕಿ ಇರುವಾಗ ವರನಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ನಿಗದಿತ ದಿನದಂದೇ ಮದುವೆ ನಡೆಯಬೇಕಿತ್ತು.
ಈ ವೇಳೆ ವಧು ವರರ ಸಂಬಂಧಿಗಳು ಸ್ಥಳೀಯ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಪಿಪಿಇ ಕಿಟ್ ಧರಿಸಿ ವಿವಾಹ ನಡೆಸುವಂತೆ ಸಲಹೆ ಕೊಟ್ಟರು ಎಂದು ವರನ ಸಂಬಂಧಿಕರು ತಿಳಿಸಿದ್ದಾರೆ. ವಿವಾಹ ನೆರವೇರಿಸುವ ಹಿರಿಯರು ಕೂಡ ಪಿಪಿಇ ಕಿಟ್ಟ ಧರಿಸಿದ್ದರು. ಸಂಪ್ರದಾಯದಂತೆ ಅಗ್ನಿಕುಂಡ ಸುತ್ತಿ, ಮಂತ್ರಗಳನ್ನು ಹೇಳುವ ಮೂಲಕ ಸಪ್ತಪದಿ ತುಳಿಸಲಾಯಿತು ಎಂದು ವರನ ಸಹೋದರ ತಿಳಿಸಿದ್ದಾರೆ. ಸರ್ಕಾರದ ಮಾರ್ಗಸೂಚಿಯಂತೆ ವಿವಾಹ ನೆರವೇರಿಸಲಾಯಿತು ಎಂದು ಸ್ಥಳೀಯ ನೊಡೆಲ್ ಅಧಿಕಾರಿ ಹೇಳಿದ್ದಾರೆ.