Connect with us

    LATEST NEWS

    ಪಂಪ್ ವೆಲ್ ಪ್ಲೈಓವರ್ ಗೋಡೆ ಮಲೆ ಅವಹೇಳನಕಾರಿ ಬರಹ – ಇಬ್ಬರು ಬಾಲಕರು ಪೊಲೀಸ್ ವಶಕ್ಕೆ

    ಮಂಗಳೂರು ಎಪ್ರಿಲ್ 27: ಮಂಗಳೂರಿನ ಪಂಪ್ ವೆಲ್ ಮೇಲ್ಸೆತುವೆಯ ಗೋಡೆಯ ಮೇಲೆ ಅವಹೇಳನಕಾರಿ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


    ನಗರದ ಖಾಸಗಿ ಕಾಲೇಜಿನ ವಿಧ್ಯಾರ್ಥಿಗಳಾಗಿದ್ದು, ಇವರು ಎಪ್ರಿಲ್ 20ರಂದು ಕರ್ನಾಟಕ ಬ್ಯಾಂಕ್ ಹೆಡ್ ಆಫೀಸ್ ಮುಂಭಾಗದಲ್ಲಿರುವ ಪಂಪವೆಲ್ ಫ್ಲೈ ಓವರ್ ಗೋಡೆ ಮೇಲೆ ಅವಹೇಳನಕಾರಿ ಪದ ಹಾಗೂ ಲಾಕ್ ಡೌನ್ ಬೇಕಾಗಿದೆ ಎನ್ನುವ ಬರಹವನ್ನು ಕೆಂಪು ಬಣ್ಣದಲ್ಲಿ ದೊಡ್ಡದಾಗಿ ಬರೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಸಿಸಿಟಿವಿ ಆಧರಿಸಿ ಇಬ್ಬರು ಬಾಲಾಪರಾಧಿಗಳನ್ನು ಬಂಧಿಸಲಾಗಿದೆ. ಇಬ್ಬರು ಕೂಡಾ ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು ಲಾಕ್‌ಡೌನ್‌ ಆದರೆ ತಮ್ಮ ಪರೀಕ್ಷೆ ಮುಂದೂಡಿಕೆ ಆಗುತ್ತದೆ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply