Connect with us

DAKSHINA KANNADA

ಕೊರೊನಾ ವಾರಿಯರ್ ಆಶಾ ಕಾರ್ಯಕರ್ತೆ ನಾಪತ್ತೆ….!!

ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಪುತ್ತೂರು ಜೂನ್ 10: ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕಿನ ಐತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟತ್ತಿಲ್ ಮನೆಯ ಕೆ ಅನುಪ್ ಎಂಬುವರ ಪತ್ನಿ ಸೌಮ್ಯ (34) ಎನ್ನುವವರು ನಾಪತ್ತೆಯಾದವರು.


ಸೌಮ್ಯ ಐತೂರು ಗ್ರಾಮ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯಾಗಿದ್ದು, ಕೋರೋನಾ ವಾರಿಯರ್‌ ಆಗಿ ಕೂಡಾ ಇವರು ಕೆಲಸ ಮಾಡಿಕೊಂಡಿದ್ದರು. ದಿನಾಂಕ 08.06.2020 ಬೆಳ್ಳಿಗ್ಗೆ 10.30 ಗಂಟೆಗೆ ಐತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗರ್ಭಿಣಿ ಮಹಿಳೆಯೋರ್ವರನ್ನು ಡೆಲಿವರಿಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಲು ಇದೆ ಎಂದು ಹೇಳಿ ಹೊರಟ ಇವರು ನಂತರದಲ್ಲಿ ಕಾಣೆಯಾಗಿದ್ದಾರೆ.

ಆಟೋ ರಿಕ್ಷಾವನ್ನು ಬಾಡಿಗೆ ಮಾಡಿ ಕಡಬ ಸರಕಾರಿ ಆಸ್ಪತ್ರೆಗೆ ಬಂದಿದ್ದಾಗಿ ಮಾಹಿತಿ ಲಭಿಸಿದೆ. ಆಟೋರಿಕ್ಷಾ ಚಾಲಕನು ಕಡಬ ಸರ್ಕಾರಿ ಆಸ್ಪತ್ರೆಯವರೆಗೆ ಹೋಗಿ ಸೌಮ್ಯ ರನ್ನು ಬಿಟ್ಟು ಬಂದಿದ್ದರು. ನಂತರ ಸಂಜೆಯಾದರೂ ಸೌಮ್ಯ ಮನೆಗೆ ಬಾರದೇ ಇದ್ದುದರಿಂದ ಅನೂಪ್ ಅವರು ಸಂಬಂಧಿಕರ ಮತ್ತು ಪರಿಚಯಸ್ಥರ ಹಾಗೂ ಸುತ್ತಮುತ್ತ ಪರಿಸರ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿದರೂ ಸೌಮ್ಯ ರವರು ಪತ್ತೆಯಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸೌಮ್ಯ ರವರ ಪತಿ ಅನೂಪ್ ಕಡಬ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಇನ್ನು ಈ ಬಗ್ಗೆ ತನಿಖೆ ನಡೆಯುತ್ತಿದೆ.

Facebook Comments

comments