LATEST NEWS
ಕರೋನಾ ವೈರಸ್ ಆತಂಕ, ಮಂಗಳೂರಿನಲ್ಲೂ ಹೈ ಅಲರ್ಟ್ !

ಕರೋನಾ ವೈರಸ್ ಆತಂಕ, ಮಂಗಳೂರಿನಲ್ಲೂ ಹೈ ಅಲರ್ಟ್ !
ಮಂಗಳೂರು ಜನವರಿ 29: ಚೀನಾದಲ್ಲಿ ಮಾರಕವಾಗಿ ಕಾಡುತ್ತಿರುವ ಕರೋನಾ ವೈರಸ್ ಈಗಾಗಲೇ ನೂರಾರು ಜನರನ್ನು ಆಹುತಿ ಪಡೆದುಕೊಂಡಿದೆ. ಈ ಮಾರಕ ರೋಗದ ತಡೆಗೆ ಚೀನಾದಲ್ಲಿ ಹೈ ಎಲರ್ಟ್ ಕೂಡಾ ಘೋಷಿಸಲಾಗಿದೆ. ರೋಗ ಹೆಚ್ಚಾಗಿ ಪತ್ತೆಯಾದ ವ್ಯೂಹನ್ ನಲ್ಲಿ ಪತ್ತೆಯಾದ ಈ ವೈರಸ್ ಇದೀಗ ಇಡೀ ವಿಶ್ವಕ್ಕೆ ಹರಡುವ ಹಂತಕ್ಕೆ ತಲುಪಿ ನಿಂತಿದೆ. ಈ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳೂ ತಮ್ಮ ತಮ್ಮ ಗಡಿಗಳಲ್ಲಿ ಹೆಚ್ಚಿನ ನಿಗಾ ವಹಿಸುತ್ತಿವೆ.
ಭಾರತಕ್ಕೂ ಈ ವೈರಸ್ ಕಾಲಿಡುವ ಸಾಧ್ಯತೆ ಹಿನ್ನಲೆಯಲ್ಲಿ ಚೀನಾದಿಂದ ದೇಶಕ್ಕೆ ಬರುವ ಎಲ್ಲ ಪ್ರಯಾಣಿಕರನ್ನೂ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ವೈರಾಣು ಪತ್ತೆ ಸೆಂಟರ್ ಗಳನ್ನು ತೆರೆಯಲಾಗಿದೆ.

ಮಂಗಳೂರಿನ ನವ ಮಂಗಳೂರು ಬಂದರಿನಲ್ಲೂ ಈ ವೈರಾಣು ಪತ್ತೆ ಸೆಂಟರ್ ತೆರೆಯಲಾಗಿದೆ. ಮಂಗಳೂರು ಬಂದರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಚೀನಾದಿಂದ ಹಡಗುಗಳ ಆಗಮನ ಹಾಗೂ ನಿರ್ಗಮನವಾಗುತ್ತಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರಕಾರ ಈ ಬಗ್ಗೆ ಈಗಾಗಲೇ ಸೂಚನೆಯನ್ನು ನೀಡಿದ ಮೇರೆಗೆ ನವ ಮಂಗಳೂರು ಬಂದರಿನಲ್ಲೂ ಈ ವ್ಯವಸ್ಥೆಯನ್ನು ಮಾಡಲಾಗಿದೆ.