Connect with us

DAKSHINA KANNADA

ಕರೋನಾ ನಿಗ್ರಹಕ್ಕಾಗಿ ನಾಳೆ ಗೆಜ್ಜೆಗಿರಿಯಲ್ಲಿ ಮಾತೆ ದೇಯಿ ಬೈದ್ಯೆತಿಗೆ ಶತೌಷಧಿ ದ್ರವ್ಯ ಕಲಶಾಭಿಷೇಕ

ಕರೋನಾ ನಿಗ್ರಹಕ್ಕಾಗಿ ನಾಳೆ ಗೆಜ್ಜೆಗಿರಿಯಲ್ಲಿ ಮಾತೆ ದೇಯಿ ಬೈದ್ಯೆತಿಗೆ ಶತೌಷಧಿ ದ್ರವ್ಯ ಕಲಶಾಭಿಷೇಕ

ಪುತ್ತೂರು ಮಾ.15: ಕೊರೊನಾ ಮಾರಿ ನಿಗ್ರಹಕ್ಕಾಗಿ ಸೋಮವಾರ ಗೆಜ್ಜೆಗಿರಿಯಲ್ಲಿ ಮಾತೆ ದೇಯಿ ಬೈದ್ಯೆತಿಗೆ ಶತೌಷಧಿ ದ್ರವ್ಯ ಕಲಶಾಭಿಷೇಕ ನಡೆಸಲು ನಿರ್ಧರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮಾ.16ರಂದು ಸೋಮವಾರ ಮಹಾಮಾತೆಗೆ ಕ್ಷೇತ್ರದ ತಂತ್ರಿಗಳಾದ ಲೋಕೇಶ್ ಶಾಂತಿ ಅವರ ನೇತೃತ್ವದಲ್ಲಿ ಕಲಶಾಭಿಷೇಕ ನಡೆಯಲಿದೆ. ಮುಂಜಾನೆಯಿಂದಲೇ ಈ ಅಪೂರ್ವ ಕಲಶಾಭಿಷೇಕ ಆರಂಭಗೊಳ್ಳಲಿದೆ.

ನೂರು ಬಗೆಯ ಔಷಧೀಯ ಗಿಡಮೂಲಿಕೆಗಳ ದ್ರವ್ಯಗಳನ್ನು ಓಷಧಿ ಸೂಕ್ತದಿಂದ ಅಭಿಮಂತ್ರಿಸಿ, ಪವಮಾನ ಹೋಮ, ಧನ್ವಂತರಿ ಹೋಮ ಸಹಿತವಾಗಿ ಕಲಶಾಭಿಷೇಕ ನಡೆಯಲಿದೆ. ಪ್ರಸನ್ನ ಕಾಲದಲ್ಲಿ ಮಾತೆಯ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಲೋಕ ಕಲ್ಯಾಣಾರ್ಥವಾಗಿ ನಡೆಯುವ ಈ ಅಪೂರ್ವ ಶತೌಷಧಿ ದ್ರವ್ಯ ಕಲಶಾಭಿಷೇಕದ ಫಲವಾಗಿ ಮಾತೆಯ ಪೂರ್ಣ ಅನುಗ್ರಹ ಲೋಕಕ್ಕಿ ಸಿಗಲಿ, ಜಗತ್ತು ಕೊರೋನಾ ಮುಕ್ತವಾಗಲಿ‌ ಎಂದು ಪ್ರಾರ್ಥಿಸಲಾಗವುದು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *