Connect with us

    LATEST NEWS

    ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಎರಡು ಕೊರೊನಾ ಪ್ರಕರಣ ದೃಢ

    ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಎರಡು ಕೊರೊನಾ ಪ್ರಕರಣ ದೃಢ

    ಮಂಗಳೂರು ಮೇ 01: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಎರಡು ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಫಸ್ಟ್ ನ್ಯೂರೊ ಸಂಪರ್ಕದಿಂದ ಮತ್ತೆ ಇಬ್ಬರಿಗೆ ಕೊರೊನಾ ಸೊಂಕು ತಗುಲಿದೆ.

    ಬಂಟ್ವಾಳದ 69 ವರ್ಷದ ಮತ್ತು ಬೊಳೂರು ಗ್ರಾಮದ 62 ವರ್ಷದ ವೃದ್ದನಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಎಪ್ರಿಲ್ 19 ರಂದು ಕೊರೊನಾಕ್ಕೆ ಬಲಿಯಾದ ಮಹಿಳೆ ಸಂಬಂಧಿ ಹಾಗೂ ನೆರೆಮನೆಯವರಾಗಿರುವ ಬಂಟ್ವಾಳದ 69 ವರ್ಷದ ವೃದ್ದ ಮತ್ತು ಬೋಳಾರ ನಿವಾಸಿ ನಿನ್ನೆ ಪಾಸಿಟಿವ್ ಆದ ವೃದ್ದೆಯ 63 ವರ್ಷದ ಪತಿಗೆ ಕೊರೊನಾ ಸೊಂಕು ತಗಲಿದೆ. ಬೋಳೂರಿನ ಪಿ- 536 ಪತ್ನಿಯ ಸಂಪರ್ಕದಿಂದ ಪತಿಗೆ ಸೊಂಕು ಮತ್ತು ಬಂಟ್ವಾಳದ ಪಿ-309 ದ್ವಿತೀಯ ಸಂಪರ್ಕದಿಂದ ವೃದ್ದನಿಹೆ ಸೊಂಕು ತಗುಲಿದೆ.

    ಈ ಮೂಲಕ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕಿತರ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ. ಈಗಾಗಲೇ 12 ಮಂದಿ ಗುಣಮುಖರಾಗಿದ್ದು, 3 ಮಂದಿ ಮೃತಪಟ್ಟಿದ್ದಾರೆ. 9 ಮಂದಿ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *