Connect with us

BELTHANGADI

ಬೆಳ್ತಂಗಡಿ ಬಿಸಿಎಂ ಹಾಸ್ಟೆಲ್ ನಲ್ಲಿ ಎಂಟು ಜನ ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್

ಬೆಳ್ತಂಗಡಿ, ಮಾರ್ಚ್ 25: ಬೆಳ್ತಂಗಡಿ ನಗರದ ಹಳೆಕೋಟೆಯಲ್ಲಿರುವ ಖಾಸಗಿ ಕಟ್ಟದಲ್ಲಿರುವ ಸರಕಾರಿ ವಿದ್ಯಾರ್ಥಿನಿಯರ ಬಿಸಿಎಂ ಹಾಸ್ಟೆಲ್ ನಲ್ಲಿ ಎಂಟು ಜನ ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಈಗ ತಾಲೂಕಿನ ವಿವಿಧ ಕಾಲೇಜಿನ ಸಹಪಾಠಿಗಳಿಗೆ ಅಂತಹ ಉಂಟಾಗಿದೆ.

ಹಳೆಕೋಟೆ ಬಿಸಿಎಂ ಹಾಸ್ಟೆಲಿನಲ್ಲಿ ಬೇರೆ ಬೇರೆ ಊರಿನಿಂದ ಬಂದು ತಾಲೂಕಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ನಿನ್ನೆ ಒರ್ವ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಬಳಿಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಇಂದು ಸಂಜೆ ಏಳು ಮಂದಿಗೆ ಪಾಸಿಟಿವ್ ಬಂದಿದೆ ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.