Connect with us

LATEST NEWS

ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾದ ಪಿಕಪ್ ವಾಹನ – ವಿಡಿಯೋ ವೈರಲ್

ಮಂಗಳೂರು ಮಾರ್ಚ್ 25: ಮಂಗಳೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ಪಿಕಪ್ ವಾಹನವೊಂದು ಡಿವೈಡರ್ ಗೆ ಬಡಿದು ಪಲ್ಟಿಯಾದ ಘಟನೆ ನಡೆದಿದ್ದು, ಈ ಅಪಘಾತದ ದೃಶ್ಯ ವೈರಲ್ ಆಗಿದೆ.

ವಾಣಿಜ್ಯ ಮಳಿಗೆಯೊಂದರ ಅವೈಜ್ಞಾನಿಕ ಪಾರ್ಕಿಂಗ್​ನಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಮಿನಿ ಟೆಂಪೋಗೆ ಲಾರಿ ಅಡ್ಡ ಬಂದ ಪರಿಣಾಮ ಘಟನೆ ಸಂಭವಿಸಿದೆ ಎನ್ನಲಾಗಿದೆ.


ತೊಕ್ಕೊಟ್ಟು ಕಡೆಯಿಂದ ಮಂಗಳೂರಿನತ್ತ ಲೈನ್ ಸೇಲ್ ವಾಹನ ತೆರಳುತ್ತಿತ್ತು. ಈ ವೇಳೆ ಹೆದ್ದಾರಿಯಲ್ಲಿಟ್ಟಿದ್ದ ತಡೆಯನ್ನು ತಪ್ಪಿಸುವಾಗ ರಿಟ್ಝ್ ಕಾರು ಬಲಭಾಗಕ್ಕೆ ಚಲಿಸಿದ್ದು, ಕೂಡಲೇ ಲಾರಿ ಚಾಲಕನೂ ಬಲಭಾಗಕ್ಕೆ ಒಮ್ಮೆಲೇ ತಿರುಗಿಸಿದ್ದು, ಈ ವೇಳೆ ವೇಗವಾಗಿ ಬರುತ್ತಿದ್ದ ಲೈನ್​ಸೇಲ್ ವಾಹನ ಡಿಕ್ಕಿ ಹೊಡೆದು ರಸ್ತೆ ಡಿವೈಡರ್ ಮೇಲೇರಿ ಮಗುಚಿ ಬಿದ್ದಿದೆ ಈ ಘಟನೆಯಲ್ಲಿ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.