LATEST NEWS
ಮಂಗಳೂರಿನಲ್ಲಿ ಕೊರೊನಾ ಹೊಸ ತಳಿ ‘ಇಟಾ’ ಪತ್ತೆ…!!
ಮಂಗಳೂರು ಅಗಸ್ಟ್ 06: ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಕೊರೊನಾ ವೈರಲ್ ನ ಡೆಲ್ಟಾ ತಳಿ ಹಾವಳಿ ನಡುವೆ ಈಗ ಮಂಗಳೂರಿನಲ್ಲಿ ಕೊರೊನಾದ ಮತ್ತೊಂದು ಹೊಸ ತಳಿ ಇಟಾ ಪತ್ತೆಯಾಗಿದೆ.
ಇಟಾ (ಬಿ.1.525) ಹೆಸರಿನ ಹೊಸ ತಳಿಯ ಕೊರೊನಾ ವೈರಾಣು ಗುರುವಾರ ಪತ್ತೆಯಾಗಿದೆ. ಈ ವೈರಾಣುವಿನ ತೀವ್ರತೆ ತಿಳಿಯಲು ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎರಡು ತಿಂಗಳ ಹಿಂದೆ ಕತಾರ್‌ನಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಯೊಬ್ಬರು ಕೋವಿಡ್ ಪೀಡಿತರಾಗಿದ್ದರು. ಅವರ ಮಾದರಿಯನ್ನು ಜಿನೋಮಿಕ್ ಸಿಕ್ವೆನ್ಸೀಸ್ (ಅನುಕ್ರಮಣಿಕೆ) ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅವರಲ್ಲಿ ಇಟಾ ತಳಿಯ ವೈರಾಣು ಕಾಣಿಸಿಕೊಂಡಿತ್ತು ಎನ್ನುವುದು ಈಗ ದೃಢಪಟ್ಟಿದೆ.
ಹೊಸದಾಗಿ ಒಂದು ಡೆಲ್ಟಾ ಪ್ಲಸ್ ಪ್ರಕರಣ ಕೂಡ ಖಚಿತಪಟ್ಟಿದ್ದು, ಈ ತಳಿಯ ವೈರಾಣು ಹೊಂದಿದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ.