Connect with us

    LATEST NEWS

    ದಕ್ಷಿಣಕನ್ನಡ ಜಿಲ್ಲೆ ಒಂದೇ 5 ಜನ ಕೊರೊನಾಗೆ ಬಲಿ…46ಕ್ಕೆ ಏರಿದ ಸಾವಿನ ಸಂಖ್ಯೆ

    ಮಂಗಳೂರು ಜುಲೈ 12: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆದಿದ್ದು ಇಂದು ಒಂದೇ ದಿನ 5 ಜನ ಕೊರೊನಾಗೆ ಬಲಿಯಾಗಿದ್ದು, ಇದರೊಂದಿಗೆ ಕೊರೊನಾದಿಂದ ಜಿಲ್ಲೆಯಲ್ಲಿ 46 ಮಂದಿ ಸಾವನಪ್ಪಿದ್ದಾರೆ.
    ಇಂದು ಬೆಳ್ತಂಗಡಿ ಪಿಲಿಚಾಮುಂಡಿಕಲ್ಲು ನಿವಾಸಿ 60 ವರ್ಷದ ವೃದ್ದ, ಪುತ್ತೂರಿನ ಮೂಲಡ್ಕ ನಿವಾಸಿ 50 ವರ್ಷದ ವ್ಯಕ್ತಿ, ಮಂಗಳೂರಿನ ಉರ್ವಸ್ಟೋರ ನ 72 ವರ್ಷದ ವೃದ್ದ, ಮಂಗಳೂರಿನ ಬಳ್ಳಾಲ್ ಬಾಗ್ ನಿವಾಸಿ 60 ವರ್ಷದ ವೃದ್ದೆ ಹಾಗೂ ಮಂಗಳೂರಿನ ಬಂದರು ನಿವಾಸಿ 68 ವರ್ಷದ ವೃದ್ದೆ ಕೊರೊನಾಗೆ ಬಲಿಯಾಗಿದ್ದಾರೆ.


    ಐದು ಮಂದಿಯಲ್ಲಿ ನಾಲ್ವರು ಮಂಗಳೂರು ಸರಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಮೃತರಾಗಿದ್ದು, ಒಬ್ಬರು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನಪ್ಪಿದವರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ.
    ಈ ನಡುವೆ ಇಂದು ಕೂಡ ಜಿಲ್ಲೆಯಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣ ದಾಖಲಾಗಲಿದ್ದು, 192ಕ್ಕೂ ಅಧಿಕ ಕೊರೊನಾ ಸೊಂಕಿನ ಪ್ರಕರಣ ದಾಖಲಾಗಲಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *