KARNATAKA
ಬೆಂಗಳೂರು ಒಂದೇ ದಿನ 783..ದಾಖಲೆಯ ಓಟ

ಬೆಂಗಳೂರು ಜೂನ್ 28: ಕರ್ನಾಟಕದಲ್ಲಿ ಕೊರೊನಾ ಕೈ ಮೀರಿ ಹೋಗಿದ್ದು ಇಂದು ಒಂದೇ ದಿನ 1267 ಕೊರೊನಾ ಪ್ರಕರಣಗಳು ದಾಖಲಾಗುವುದರೊಂದಿಗೆ ಕರ್ನಾಟಕದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 7507ಕ್ಕೆ ಏರಿಕೆಯಾಗಿದೆ.
ಕರ್ನಾಟಕದಲ್ಲಿ ಬೆಂಗಳೂರು ಮತ್ತೊಂದು ಮುಂಬೈ ಆಗುವತ್ತ ದಾಪುಗಾಲು ಇಡುತ್ತಿದ್ದು, ಬೆಂಗಳೂರಿನಲ್ಲಿ ಇಂದು ಒಂದೇ ದಿನ ದಾಖಲೆಯ 783 ಕೊರೊನಾ ಪ್ರಕರಣ ದಾಖಲಾಗಿದೆ. ಇಂದು ರಾಜ್ಯದಲ್ಲಿ 16 ಸಾವು ಸಂಭವಿಸಿದ್ದು, 220 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.
