LATEST NEWS
ದಕ್ಷಿಣಕನ್ನಡದಲ್ಲಿ ಬ್ಯೂಟಿ ಪಾರ್ಲರ್‌ಗಳ ಸ್ವಯಂ ಪ್ರೇರಿತ ಬಂದ್‌ಗೆ ನಿರ್ಧಾರ

ಮಂಗಳೂರು, ಜುಲೈ 11: ದಕ್ಷಿಣಕನ್ನಡದಲ್ಲಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಒಂದೆಡೆ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ದಿನವೂ ಶತಕ ದಾಟುತ್ತಿದ್ದು ಇನ್ನೊಂದೆಡೆ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನಲೆ ಕೊರೊನಾ ಭೀತಿಗೆ ಜಿಲ್ಲೆಯ ಬ್ಯೂಟಿ ಪಾರ್ಲರ್‌ಗಳ ಸ್ವಯಂ ಪ್ರೇರಿತ ಬಂದ್‌ಗೆ ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ನಿರ್ಧಾರ ಕೈಗೊಂಡಿದೆ.

ಸಾಂದರ್ಭಿಕ ಚಿತ್ರ
ಈ ಕುರಿತಂತೆ ಮಾಹಿತಿ ನೀಡಿದ ದ.ಕ ಜಿಲ್ಲಾ ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ಅಧ್ಯಕ್ಷೆ ಬಬಿತಾ ಶೆಟ್ಟಿ ಗ್ರಾಹಕರು ಹಾಗೂ ಸೌಂದರ್ಯ ತಜ್ಞರ ಆರೋಗ್ಯದ ಹಿತದೃಷ್ಟಿಯಿಂದ ದ.ಕ ಜಿಲ್ಲೆಯಾದ್ಯಂತ ಬ್ಯೂಟಿ ಪಾರ್ಲರ್ ಗಳ ಸ್ವಯಂ ಪ್ರೇರಿತ ಬಂದ್‌ಗೆ ನಿರ್ಧಾರ ಮಾಡಿದ್ದು, ಮುಂದಿನ ಸೂಚನೆಯವರೆಗೆ ಸ್ವಯಂ ಪ್ರೇರಿತ ಬಂದ್ ಮಾಡಲು ತೀರ್ಮಾನಿಸಿದ್ದೆವೆ ಎಂದು ತಿಳಿಸಿದ್ದಾರೆ.


ಸಾಂದರ್ಭಿಕ ಚಿತ್ರ
ಲಾಕ್‌ಡೌನ್ ಸಂದರ್ಭ ಸರ್ಕಾರವೇ ಕೊರೊನಾ ಮುಂಜಾಗೃತಾ ಕ್ರಮವಾಗಿ ಸೆಲೂನ್ ಹಾಗೂ ಬ್ಯೂಟಿಪಾರ್ಲರ್‌ಗಳನ್ನು ಬಂದ್ ಮಾಡುವಂತೆ ಸೂಚಿಸಿತ್ತು. ನಂತರ ಅನ್ ಲಾಕ್ ಅವಧಿಯಲ್ಲಿ ಸರಕಾರ ಮಾರ್ಗಸೂಚಿಗಳ ಅನ್ವಯ ಪಾರ್ಲರ್ ಗಳನ್ನು ತೆರೆಯಲು ಅವಕಾಶ ನೀಡಿತ್ತು, ಆದರೆ ದಕ್ಷಿಣಕನ್ನಡದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಲ್ಲಿರುವು ಅಲ್ಲದೆ ನಿನ್ನೆ ಒಂದೇ ದಿನ ಕೊರೊನಾದಿಂದಾಗಿ 8 ಮಂದಿ ಸಾವೀಗಾಡಿದ್ದು, ಆತಂಕಕ್ಕೆ ಕಾರಣವಾಗಿದೆ.