LATEST NEWS
ಬೆಂಗಳೂರು ಖಾಸಗಿ ವಾಹಿನಿ ಪತ್ರಕರ್ತನಿಗೆ ಕೊರೊನಾ ಸೊಂಕು 30 ಕ್ಕೂ ಹೆಚ್ಚು ಪತ್ರಕರ್ತರಿಗೆ ಕ್ವಾರಂಟೈನ್

ಬೆಂಗಳೂರು ಖಾಸಗಿ ವಾಹಿನಿ ಪತ್ರಕರ್ತನಿಗೆ ಕೊರೊನಾ ಸೊಂಕು 30 ಕ್ಕೂ ಹೆಚ್ಚು ಪರ್ತಕರ್ತರಿಗೆ ಕ್ವಾರಂಟೈನ್
ಬೆಂಗಳೂರು: ಕೊರೊನಾ ಈಗ ಸುದ್ದಿ ಮಾದ್ಯಮದವರ ಬೆನ್ನು ಬಿದ್ದಿದ್ದು ಬೆಂಗಳೂರಿನ ಸುದ್ದಿ ವಾಹಿನಿಯೊಂದರ ಕ್ಯಾಮೆರಾಮನ್ ಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರೊಂದಿಗೆ ಸಂಪರ್ಕ ಹೊಂದಿರುವ 30ಕ್ಕೂ ಹೆಚ್ಚು ಪತ್ರಕರ್ತರಿಗೆ ಹೋಂ ಕ್ವಾರಂಟೈನ್ ನಲ್ಲಿರುವಂತೆ ಆರೋಗ್ಯ ಇಲಾಖೆ ಆದೇಶ ನೀಡಿದೆ.
ಸಿಎಂ ಬಿಎಸ್ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ರಾಜ್ಯ ಆರೋಗ್ಯ ಇಲಾಖೆ ಶುಕ್ರವಾರದಿಂದ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದವರನ್ನು ಕೊವಿಡ್-19 ಪರೀಕ್ಷೆಗೆ ಒಳಪಡಿಸುತ್ತಿದ್ದು, ಶುಕ್ರವಾರ ಒಟ್ಟು 120 ಮಂದಿಯನ್ನು ಪರೀಕ್ಷಿಸಲಾಗಿದೆ.

ಖಾಸಗಿ ವಾಹಿನಿಯ ಕ್ಯಾಮೆರಾಮೆನ್ ಆಗಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿಯಲ್ಲಿ ಶನಿವಾರ ಸೋಂಕು ದೃಡಪಟ್ಟಿದೆ. ಈ ಅವರೊಂದಿಗೆ ಸಂಪರ್ಕದಲ್ಲಿದ್ದ ವಿವಿಧ ಸುದ್ದಿ ವಾಹಿನಗಳ ವರದಿಗಾರರು ಸೇರಿದಂತೆ 30ಕ್ಕೂ ಹೆಚ್ಚು ಪ್ರತ್ರಕರ್ತರನ್ನು ಕ್ವಾರಂಟೈನ್ ಮಾಡಲಾಗಿದೆ.
ಈ ಪರೀಕ್ಷೆಯಲ್ಲಿ ಕ್ಯಾಮೆರಾಮನ್ ಗೆ ಸೋಂಕು ಕಂಡುಬಂದಿರುವುದರಿಂದ ಆತನನ್ನು ಕೊವಿಡ್-19 ಚಿಕಿತ್ಸೆಗಾಗಿ ಮೀಸಲಿರಿಸಲಾಗಿರುವ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಲ್ಲದೇ ಕ್ಯಾಮೆರಾಮನ್ ಕೆಲಸ ನಿರ್ವಹಿಸುವ ಸಂಸ್ಥೆಯ ಸಹೋದ್ಯೋಗಿ, ಕ್ಯಾಬ್ ಡ್ರೈವರ್, ಸೆಕ್ಯೂರಿಟ್ ಗಾರ್ಡ್ ಸೇರಿದಂತೆ ಸೋಂಕಿತರ ಸಂಪರ್ಕದಲ್ಲಿದ್ದ ಎಲ್ಲರನ್ನೂ ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ ಮಾಡಲು ಸರ್ಕಾರ ಹೋಟೆಲ್ ಗುರುತಿಸಿದೆ. ಇದಲ್ಲದೇ ಅವರವರ ಕುಟುಂಬಸ್ಥರಿಗೂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ.