Connect with us

    LATEST NEWS

    ನಗರದ ಬೋಳೂರಿನ ಜನರ ಹೃದಯ ವೈಶಾಲ್ಯತೆ ಬಗ್ಗೆ ನನಗೆ ಹೆಮ್ಮೆ ಇದೆ – ಶಾಸಕ ಕಾಮತ್

    ನಗರದ ಬೋಳೂರಿನ ಜನರ ಹೃದಯ ವೈಶಾಲ್ಯತೆ ಬಗ್ಗೆ ನನಗೆ ಹೆಮ್ಮೆ ಇದೆ – ಶಾಸಕ ಕಾಮತ್

    ಮಂಗಳೂರು ಎಪ್ರಿಲ್ 25: ಇಂದು ಕೊರೊನಾ ಸೋಂಕಿತ ವ್ಯಕ್ತಿಗಳ ಶವ ಸಂಸ್ಕಾರದ ವಿಚಾರವಾಗಿ ನಾಗರಿಕರೊಂದಿಗೆ ಚರ್ಚಿಸಲು ಎರಡನೇ ಬಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ಸ್ಥಳೀಯ ಪಾಲಿಕೆ ಸದಸ್ಯರಾದ ಜಗದೀಶ್ ಶೆಟ್ಟಿ ಬೋಳೂರು ಇವರ ಉಪಸ್ಥಿತಿಯಲ್ಲಿ ಸ್ಥಳಕ್ಕೆ ಭೇಟಿ ನೀಡಲಾಯಿತು.

    ಈ ಸಂಧರ್ಭದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯ ಶವ ಸಂಸ್ಕಾರದಿಂದ ಸ್ಮಶಾನ ಪರಿಸರದ ನಿವಾಸಿಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ಸ್ಮಶಾನದ ಸುತ್ತ ಮುತ್ತಲಿರುವ ಸುಮಾರು 50 ಮನೆಗಳಿಗೆ ಕೂಡ ವೈಜ್ಞಾನಿಕ ಮಾಹಿತಿ ನೀಡಿ ಮನದಟ್ಟು ಮಾಡಲಾಗಿದ್ದು ತಪ್ಪು ತಿಳುವಳಿಕೆ ದೂರ ಮಾಡಲಾಗಿದೆ. ವಾಸ್ತವ ಅರಿತು ಬೋಳೂರು ಪರಿಸರಸದ ನಿವಾಸಿಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸಲು ಸಮ್ಮತಿ ಸೂಚಿಸಿದ್ದಾರೆ.

    ಮಂಗಳೂರಿನ ನಗರ ಪ್ರದೇಶದ ಪ್ರಮುಖ ಸ್ಮಶಾನಗಳಲ್ಲಿ ಒಂದಾಗಿರುವ ಬೋಳೂರಿನಲ್ಲಿ ವಿದ್ಯುತ್ ಚಾಲಿತ ಶವಸಂಸ್ಕಾರ ಘಟಕವಿದೆ. ಹಾಗಾಗಿ ಪ್ರಧಾನವಾಗಿ ಅಲ್ಲಿನ ಜನರಿಗೆ ಈ ಕುರಿತು ಮಾಹಿತಿ ನೀಡಿ, ಅದರ ಸಾಧಕ ಬಾಧಕಗಳ ಕುರಿತು ವೈಜ್ಞಾನಿಕ ಸಾಕ್ಷಿಗಳನ್ನು ನೀಡಿ ಮನವರಿಕೆ ಮಾಡಿಕೊಡಲಾಯಿತು. ಅಂತ್ಯ ಸಂಸ್ಕಾರದ ಬಳಿಕ ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸರ್ ಸಿಂಪಡಣೆ ಮುಂತಾದ ಕ್ರಮಗಳನ್ನು ಕೈಗೊಳ್ಳುತ್ತದೆ. ಹಾಗಾಗಿ ಆ ಕುರಿತು ಭೀತಿ ಪಡಬೇಕಾದ ಅವಶ್ಯಕತೆ ಇಲ್ಲ ಎಂಬುದಾಗಿ ತಿಳಿ ಹೇಳಲಾಯಿತು.

    ಮುಂದೆ ಯಾವುದೇ ಸಂಧರ್ಭದಲ್ಲಿ,ಯಾವುದೇ ಪರಿಸ್ಥಿತಿಯಲ್ಲಿ ಶವ ಸಂಸ್ಕಾರ ಮಾಡುವುದಕ್ಕೆ ನಮ್ಮ ಜಿಲ್ಲೆಯಲ್ಲಿ ಕೊರೊನಾ ಪೀಡಿತ ಮೊದಲ ವ್ಯಕ್ತಿ ಮೃತ ಪಟ್ಟಾಗ ತಾವು ಶವಸಂಸ್ಕಾರಕ್ಕೆ ಅವಕಾಶ ಕಲ್ಪಿಸಿದ್ದೀರಿ.ಎರಡನೇ ವ್ಯಕ್ತಿ ಮೃತ ಪಟ್ಟಾಗಲೂ ನೀವು ವಿರೋಧ ವ್ಯಕ್ತ ಪಡಿಸಲಿಲ್ಲ,ಗುಂಪು ಸೇರಲಿಲ್ಲ ಎಂಬುವುದು ನಿಮ್ಮ ಹ್ರದಯ ವೈಶಾಲ್ಯತೆಯನ್ನು ಪ್ರದರ್ಶಿಸುತ್ತದೆ. ಮುಂದೆಯೂ ಜಿಲ್ಲಾಢಳಿತದ ಜೊತೆಗೆ ಕೈ ಜೋಡಿಸಲು ಸದಾ ಸಿದ್ಧರಾಗಿದ್ದೀರಿ ಎಂದೂ ಹೇಳಿದ್ದೀರಿ ನಿಮ್ಮೆಲ್ಲರಿಗೂ ನಾನು ಹ್ರದಯ ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ.
    ಮುಂದಿನ ದಿಗಳಲ್ಲಿ ಜಿಲ್ಲೆಯಲ್ಲಿ ಕೋರೊನಾ ಸೋಂಕಿತ ವ್ಯಕ್ತಿ ಮರಣ ಹೊಂದಿದಲ್ಲಿ ಶವ ಸಂಸ್ಕಾರವನ್ನು ವೆನ್ಲಾಕ್ ಆಸ್ಪತ್ರೆಯ ಹತ್ತಿರದ ಸ್ಮಶಾನ ವಾದ ಬೋಳೂರಿನ ವಿದ್ಯುತ್ ಚಿತಾಗಾರದಲ್ಲೇ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply