Connect with us

    BANTWAL

    ದ.ಕ ಜಿಲ್ಲೆಯ ಬಂಟ್ವಾಳದ ಮತ್ತೊಬ್ಬ ಮಹಿಳೆಗೆ ಕೊರೋನಾ ಪಾಸಿಟಿವ್

    ದ.ಕ ಜಿಲ್ಲೆಯ ಬಂಟ್ವಾಳದ ಮತ್ತೊಬ್ಬ ಮಹಿಳೆಗೆ ಕೊರೋನಾ ಪಾಸಿಟಿವ್

    ಮಂಗಳೂರು ಎಪ್ರಿಲ್ 25: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ ವೃದ್ದೆಯ ಮಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

    ಎಪ್ರಿಲ್ 21ರಂದು ಪಾಸಿಟಿವ್ ಆಗಿದ್ದ p-409 ವೃದ್ದೆಯ ಸಂಪರ್ಕದಿಂದ 33 ವರ್ಷದ ಮಹಿಳೆಗೆ ಕೊರೊನಾ ಸೊಂಕು ತಗುಲಿದೆ. ಬಂಟ್ವಾಳದ ಕಸಬಾ ಬಳಿಯ ನಾಲ್ಕು ಮಂದಿಗೆ ಪಾಸಿಟಿವ್ ಆಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಸದ್ಯ ಒಂದೇ ಕುಟುಂಬದ ಇಬ್ಬರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಇಂದು ಪಾಸಿಟಿವ್ ಆದ ಮಹಿಳೆಗೆ ಎ.19ರಂದೇ ಮಂಗಳೂರಿನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಎ.19 ರಂದು ಬಂಟ್ವಾಳದಲ್ಲಿ ಕೊರೋನಾದಿಂದ ಬಲಿಯಾಗಿದ್ದ ಮೊದಲ ಮಹಿಳೆ. ಎ.23 ರಂದು ಮಹಿಳೆಯ ಅತ್ತೆಯೂ ಕೊರೋನಾಗೆ ಬಲಿ. ಮೊದಲು ಮೃತಪಟ್ಡ ಮಹಿಳೆಯಿಂದ ನೆರೆಮನೆ ವೃದ್ದೆಗೆ ತಗಲಿದ ಸೋಂಕು, ಸದ್ಯ ವೃದ್ದೆಯ ಮಗಳಿಗೂ ಕೊರೊನಾ ತಗುಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply